ಪ್ರತಿಕೂಲ ಹವಾಮಾನ; ಬೆಂಗಳೂರಿನಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನ ಮರಳಿ ಬೆಂಗಳೂರಿಗೆ

ಮಂಗಳೂರು, ಆ. 4: ಪ್ರತಿಕೂಲ ಹವಾಮಾನದಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸಂಜೆ 6:30ಕ್ಕೆ ಬರಬೇಕಿದ್ದ ವಿಮಾನವನ್ನು ಮರಳಿ ಬೆಂಗಳೂರಿಗೆ ಮತ್ತು ದುಬೈಯಿಂದ ಮಂಗಳೂರಿಗೆ ಸಂಜೆ 6:35ಕ್ಕೆ ಬರಬೇಕಿದ್ದ ವಿಮಾನವನ್ನು ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
Next Story





