ದೇರಳಕಟ್ಟೆ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ತನ್ಶೀತ್ ಲೀಡರ್ಸ್ ಮೀಟ್

ದೇರಳಕಟ್ಟೆ: ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ವಲಯ ಸಮಿತಿ ವತಿಯಿಂದ ತನ್ಶೀತ್ ಲೀಡರ್ಸ್ ಮೀಟ್ ಹಾಗೂ ಎಸ್ ಕೆ ಎಸ್ ಬಿವಿ ದೇರಳಕಟ್ಟೆ ಹಾಗೂ ಕಿನ್ಯ ರೇಂಜ್ ಇದರ 2022-23 ರ ಸಾಲಿನ ನೂತನ ಸಾರಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ವಲಯ ಸಮಿತಿ ಅಧ್ಯಕ್ಷ ಫಾರೂಖ್ ದಾರಿಮಿ ಗ್ರಾಮಚಾವಡಿ ಅವರ ಅಧ್ಯಕ್ಷತೆಯಲ್ಲಿ ದೇರಳಕಟ್ಟೆ ಎಸ್ಕೆಎಸ್ಸೆಸ್ಸೆಫ್ ಕಚೇರಿಯಲ್ಲಿ ನಡೆಯಿತು.
ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಮಾಜಿ ಅಧ್ಯಕ್ಷ ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆ ಖತೀಬ್ ಇಸ್ಹಾಖ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಸದಸ್ಯ ಅಬೂಬಕ್ಕರ್ ರಿಯಾಝ್ ರಹ್ಮಾನಿ ಪ್ರಾಸ್ತಾವಿಕ ಪ್ರಭಾಷಣ ನಡೆಸಿದರು.
ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಅನೀಸ್ ಕೌಸರಿ ಮುಖ್ಯ ಪ್ರಭಾಷಣಗೈದರು. ಕಾರ್ಯಕ್ರಮದಲ್ಲಿ ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎಂ ಸತ್ತಾರ್, ದೇರಳಕಟ್ಟೆ ರೇಂಜ್ ಜಂ-ಈಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಸದಸ್ಯ ಆಸಿಫ್ ಅಬ್ದುಲ್ಲಾ, ದೇರಳಕಟ್ಟೆ ವಲಯ ಸಮಿತಿ ಕೋಶಾಧಿಕಾರಿ ಅಶ್ರಫ್ ಮಾರಾಠಿಮೂಲೆ ಮೊದಲಾದವರು ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ಸ್ವಾಗತಿಸಿ ವರ್ಕಿಂಗ್ ಕಾರ್ಯದರ್ಶಿ ನೌಷಾದ್ ಮಲಾರ್ ವಂದಿಸಿದರು.