ಶಿವಪುರ ದೇವಸ್ಥಾನಕ್ಕೆ ನುಗ್ಗಿ ಚಿನ್ನಾಭರಣ ಕಳವು : ಪ್ರಕರಣ ದಾಖಲು

ಹೆಬ್ರಿ, ಆ. 5: ಶಿವಪುರದ ಗ್ರಾಮದ ಬ್ಯಾಣ ಎಂಬಲ್ಲಿರುವ ಗದ್ದಿಗೆ ಅಮ್ಮನವರ ದೇವಸ್ಥಾನಕ್ಕೆ ಆ.4ರಂದು ರಾತ್ರಿ ವೇಳೆ ನುಗ್ಗಿದ ದುಷ್ಕರ್ಮಿಗಳು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಎದುರಿನ ಬಾಗಿಲಿಗೆ ಹಾಕಿರುವ ಬೀಗವನ್ನು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು, ದೇವಿಯ ಮೂರ್ತಿಗೆ ಹಾಕಿರುವ ಸುಮಾರು ಒಂದೂವರೆ ಪವನಿನ ಚಿನ್ನದ ಕರಿಮಣಿ ಮತ್ತು ಸುಮಾರು ಒಂದೂವರೆ ಪವನ್‌ನ 3 ಚಿನ್ನದ ಸಣ್ಣ ಸರ ಹಾಗೂ ಸಣ್ಣ ಚಿನ್ನದ ತಾಳಿ ಇರುವ ಬೆಳ್ಳಿಯ ಸರ ಹಾಗೂ ಎರಡು ಕಾಣಿಗೆ ಡಬ್ಬಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರಲಾಗಿದೆ.
ಇವುಗಳ ಒಟ್ಟು ಮೌಲ್ಯ 60 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story