ಚಾಮರಾಜನಗರ | ಕಾರಿನ ಮೇಲೆ ಉರುಳಿಬಿದ್ದ ಮರ: ತಂದೆ-ಮಗ ಸ್ಥಳದಲ್ಲೇ ಮೃತ್ಯು

ಚಾಮರಾಜನಗರ: ಮಾರುತಿ ಓಮ್ನಿ ಕಾರೊಂದರ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಕುದೇರು ರಸ್ತೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಸಮೀಪದ ಕುದೇರು ರಸ್ತೆಯಲ್ಲಿ ಮಾರುತಿ ಒಮ್ನಿ ನಿಂತಿದ್ದು, ರಸ್ತೆ ಬದಿಯಲ್ಲಿದ್ದ ಭಾರಿ ಗಾತ್ರದ ಆಲದ ಮರದ ಕೊಂಬೆ ಬಿದ್ದ ಪರಿಣಾಮ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಎಚ್.ಪಿ.ರಾಜು(49) ಹಾಗೂ ಅವರ ಪುತ್ರ ಶರತ್ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಚಾರಿ ಪೊಲೀಸ್ ಠಾಣೆ ಮತ್ತು ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Next Story