ಕೊಣಾಜೆ : ಹೃದಯಾಘಾತದಿಂದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ನಿಧನ
ಕರ್ತವ್ಯದಲ್ಲಿದ್ದಾಗಲೇ ಅಸ್ವಸ್ಥರಾದ ಜಗನ್ನಾಥ
ಜಗನ್ನಾಥ
ಕೊಣಾಜೆ: ಕೊಣಾಜೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಜಗನ್ನಾಥ (44) ಅವರು ಹೃದಾಯಾಘಾತದಿಂದ ಶನಿವಾರ ನಿಧನರಾದರು.
ಜಗನ್ನಾಥ ಅವರು ಕರ್ತವ್ಯದಲ್ಲಿದ್ದಾಗಲೇ ಅಸ್ವಸ್ಥರಾಗಿದ್ದು ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕೆತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ತಿಳಿದು ಬಂದಿದೆ.
ಮೃತರು ಪುತ್ತೂರು ತಾಲೂಕಿನ ಸವಣೂರು ಗ್ರಾಮದವರಾಗಿದ್ದು, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿರುತ್ತಾರೆ.
Next Story