ರಾಜ್ಯಕ್ಕೆ ಬಂದಿದ್ದ ಅಮಿತ್ ಶಾರನ್ನು ಪ್ರವಾಹ ವೀಕ್ಷಣೆಗೆ ಕರೆದೊಯ್ಯಲಿಲ್ಲ ಏಕೆ: ಸಿಎಂಗೆ ಕಾಂಗ್ರೆಸ್ ಪ್ರಶ್ನೆ
''ಡಬಲ್ ಇಂಜಿನ್ ಸರ್ಕಾರ ಊಟಕ್ಕೆ ಸಿಗದ ಉಪ್ಪಿನಕಾಯಿಯಂತೆ''

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನೆರೆ ಪರಿಹಾರದ ವಿಚಾರದಲ್ಲಿ ರಾಜ್ಯ ಸರಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಶನಿವಾರ ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ಮಳೆ ಅಬ್ಬರಕ್ಕೆ ಹಲವು ಮಂದಿ ಜೀವ ಬಿಟ್ಟಿದ್ದಾರೆ, ಅಪಾರ ಬೆಳೆ ಹಾನಿಯಾಗಿದೆ. ಬಸವರಾಜ ಬೊಮ್ಮಾಯಿ (Basavaraj Bommai) ಅವರೇ, ನೆರೆ ಪರಿಹಾರ ಕೇಳಲು ದೆಹಲಿಗೆ ಹೋಗುವ ಅಗತ್ಯವಿರಲಿಲ್ಲ, NDRF ಮುಖ್ಯಸ್ಥ ಅಮಿತ್ ಶಾ (Amit Shah) ಅವರೇ ಬಂದಿದ್ದರು. ಪ್ರವಾಹ ವೀಕ್ಷಣೆಗೆ ಕರೆದೊಯ್ಯಲಿಲ್ಲ ಏಕೆ? ಪರಿಹಾರದ ಬಗ್ಗೆ ಮಾತಾಡಲಿಲ್ಲ ಏಕೆ? ಕೇಳಲು ಭಯವೇ, ಪರಿಹಾರ ಸಿಗದು ಎಂಬ ತಾತ್ಸಾರವೇ!?'' ಎಂದು ಪ್ರಶ್ನೆ ಮಾಡಿದೆ.
ಇದನ್ನೂ ಓದಿ: ವಿರೋಧದ ಬಳಿಕ ವೆಬ್‌ಸೈಟ್ ನಲ್ಲಿ ಹಿಂದಿ ಭಾಷೆ ಅಳಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
''ಕರ್ನಾಟಕದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಕರ್ನಾಟಕದಿಂದ 6 ಕೇಂದ್ರ ಸಚಿವರಿದ್ದಾರೆ . ಡಬಲ್ ಇಂಜಿನ್ ಸರ್ಕಾರವಿದೆ ಇಷ್ಟೆಲ್ಲ ಇರುವುದು 'ಊಟಕ್ಕೆ ಸಿಗದ ಉಪ್ಪಿನಕಾಯಿಯಂತೆ'! ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರ ಬಳಿ ಯಾರೊಬ್ಬರೂ ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ತುಟಿ ಬಿಚ್ಚಲಿಲ್ಲ, ಪರಿಹಾರ ಕೇಳಲಿಲ್ಲ ಏಕೆ'' ಎಂದು ಕಾಂಗ್ರೆಸ್ ಟ್ವೀಟಿಸಿದೆ.
ಗುರುವಾರ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ವತಿಯಿಂದ ಆಯೋಜಿಸಲಾಗಿದ್ದ ‘ಸಂಕಲ್ಪ್ ಸೆ ಸಿದ್ದಿ’ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಮಳೆ ಅಬ್ಬರಕ್ಕೆ ಹಲವು ಮಂದಿ ಜೀವ ಬಿಟ್ಟಿದ್ದಾರೆ, ಅಪಾರ ಬೆಳೆ ಹಾನಿಯಾಗಿದೆ.@BSBommai ಅವರೇ, ನೆರೆ ಪರಿಹಾರ ಕೇಳಲು ದೆಹಲಿಗೆ ಹೋಗುವ ಅಗತ್ಯವಿರಲಿಲ್ಲ, NDRF ಮುಖ್ಯಸ್ಥ ಅಮಿತ್ ಶಾ ಅವರೇ ಬಂದಿದ್ದರು.
— Karnataka Congress (@INCKarnataka) August 6, 2022
ಪ್ರವಾಹ ವೀಕ್ಷಣೆಗೆ ಕರೆದೊಯ್ಯಲಿಲ್ಲ ಏಕೆ? ಪರಿಹಾರದ ಬಗ್ಗೆ ಮಾತಾಡಲಿಲ್ಲ ಏಕೆ?
ಕೇಳಲು ಭಯವೇ, ಪರಿಹಾರ ಸಿಗದು ಎಂಬ ತಾತ್ಸಾರವೇ!? pic.twitter.com/8OWEznOKME







