ಕಾಮನ್‌ವೆಲ್ತ್ ಗೇಮ್ಸ್: ಕುಸ್ತಿಪಟು ರವಿ ದಹಿಯಾಗೆ ಚಿನ್ನ

ಬರ್ಮಿಂಗ್‌ಹ್ಯಾಮ್, ಆ.6: ಭಾರತದ ಸ್ಟಾರ್ ಕುಸ್ತಿಪಟು ರವಿ ದಹಿಯಾ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಫೈನಲ್‌ನಲ್ಲಿ ನೈಜೀರಿಯದ ವಿಲ್ಸನ್‌ರನ್ನು 10-0(ತಾಂತ್ರಿಕ ಶ್ರೇಷ್ಠತೆ)ಅಂತರದಿಂದ ಮಣಿಸಿ ಚಿನ್ನದ ಪದಕ ಜಯಿಸಿದ್ದಾರೆ. ಇದರೊಂದಿಗೆ ಭಾರತವು ಕುಸ್ತಿಯಲ್ಲಿ 4ನೇ ಚಿನ್ನದ ಪದಕ ಜಯಿಸಿದೆ.
ನವೀನ್ ಹಾಗೂ ವಿನೇಶ್ ಫೋಗಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇಡುವುದರೊಂದಿಗೆ ಕನಿಷ್ಠ ಬೆಳ್ಳಿ ಪದಕವನ್ನು ದೃಢಪಡಿಸಿದ್ದಾರೆ.
ಪೂಜಾ ಗೆಹ್ಲೋಟ್(ಮಹಿಳೆಯರ ಫ್ರೀಸ್ಟೈಲ್ 50 ಕೆಜಿ)ಸ್ಕಾಟ್ಲೆಂಡ್‌ನ ಕ್ರಿಸ್ಟಿಲ್‌ಲೆಮೊಫಾಕ್‌ರನ್ನು 12-2 ಅಂತರದಿಂದ ಸೋಲಿಸಿ ಕಂಚಿನ ಪದಕ ಜಯಿಸಿದ್ದಾರೆ.
RAVI WINS GLD
— SAI Media (@Media_SAI) August 6, 2022
3 time Asian Champion & #Tokyo2020 Olympics medalist @ravidahiya60 (M-57kg) has now conquered the #CommonwealthGames, winning GOLD on his debut
Brilliant Gutwrench & winning by technical superiority, that's stoic & determined RAVI for you
1/1 pic.twitter.com/UhLFq7c8od