ಪರೀಕ್ಷೆಯ ಹಿನ್ನೆಲೆ; ಆ.8ರಿಂದ ಮಂಗಳೂರಿನಲ್ಲಿ ನಿಷೇಧಾಜ್ಞೆ

ಮಂಗಳೂರು : ಕೇಂದ್ರ ಸರಕಾರದ ಸಿಬ್ಬಂದಿ ನೇಮಕಾತಿ ಆಯೋಗದಿಂದ ನಡೆಸಲಾಗುವ ಕಂಬೈಂಡ್ ಗ್ರ್ಯಾಜುವೇಟ್ ಲೆವೆಲ್ ಎಕ್ಸಾಮಿನೇಷನ್-2021 ಪರೀಕ್ಷೆಯು ನಗರದ ಬೊಂದೇಲ್ ಬೆಸೆಂಟ್ ವಿದ್ಯಾ ಪರೀಕ್ಷಾ ಕೇಂದ್ರದಲ್ಲಿ ಆ.8ರಿಂದ ಆ.10ರ ವರೆಗೆ ನಡೆಯಲಿದೆ.
ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಅನುಮಾನಗಳಿಗೆ ಆಸ್ಪದವಿಲ್ಲದೆ ಪರೀಕ್ಷೆಯನ್ನು ಸುಲಲಿತವಾಗಿ ನಡೆಸಲು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರಚಿಸಲಾ ಗಿರುವ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ೨೦೦ ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಆ.೮ರಿಂದ ೧೦ರವರೆಗೆ ಬೆಳಗ್ಗೆ ೮ರಿಂದ ಸಂಜೆ ೫ರವರೆಗೆ ಸೆ.೧೪೪ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳೂ ಆದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.
Next Story





