ಕಾಮನ್‌ವೆಲ್ತ್ ಗೇಮ್ಸ್: ಕುಸ್ತಿಪಟು ನವೀನ್‌ಗೆ ಚಿನ್ನ

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶನಿವಾರ ನಡೆದ ಕುಸ್ತಿ ಸ್ಪರ್ಧೆಯ ಪುರುಷರ ಫ್ರೀಸ್ಟೈಲ್ 74 ಕೆಜಿ ವಿಭಾಗದ ಫೈನಲ್‌ನಲ್ಲಿ ನವೀನ್ ಪಾಕಿಸ್ತಾನದ ಮುಹಮ್ಮದ್ ಶರೀಫ್‌ರನ್ನು 9-0 ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ ಒಂದೇ ದಿನ ಕುಸ್ತಿಯಲ್ಲಿ ಭಾರತವು ಮೂರನೇ ಚಿನ್ನದ ಪದಕ ಗೆದ್ದುಕೊಂಡಿದೆ.
ಒಟ್ಟಾರೆ ಕುಸ್ತಿಯಲ್ಲಿ ಆರನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಶುಕ್ರವಾರ ಸತತ 3 ಚಿನ್ನ ಜಯಿಸಿದ್ದ ಭಾರತವು ಸತತ ಎರಡನೇ ದಿನವೂ ಹ್ಯಾಟ್ರಿಕ್ ಚಿನ್ನ ಜಯಿಸಿದೆ. ಕುಸ್ತಿಪಟುಗಳ ಸಾಹಸದಿಂದ ಭಾರತವು 12ನೇ ಚಿನ್ನ ಜಯಿಸಿದೆ. ನವೀನ್ ತಾನಾಡಿದ ಮೊದಲ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿ ಮಿಂಚಿದರು.
th GOLD FOR
— SAI Media (@Media_SAI) August 6, 2022
's Dhakad youth wrestler Naveen (M-74kg) defeats 's Tahir by points (9-0) en route to winning GOLD on his debut at #CommonwealthGames
Amazing confidence & drive from Naveen to take 's medal tally to at #B2022
Congrats #Cheer4India pic.twitter.com/UTWczNCh6a