ಕಾಮನ್ವೆಲ್ತ್: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಮಿತ್, ನೀತು

ಅಮಿತ್ ಪಂಗಲ್ / ನೀತು ಘಂಘಾಸ್ (Photo: Twitter)
ಬರ್ಮಿಂಗ್ಹ್ಯಾಮ್: ಪುರುಷರ ಫ್ಲೈವೇಟ್ ವಿಭಾಗದ ಫೈನಲ್ನಲ್ಲಿ ಅಮಿತ್ ಪಂಗಲ್ ಇಂಗ್ಲೆಂಡ್ನ ಕಿಯಾರನ್ ಮ್ಯಾಕ್ಡೊನಾಲ್ಡ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. 26 ವರ್ಷ ವಯಸ್ಸಿನ ಅಮಿತ್ ಪಂದ್ಯದ ಸಂಪೂರ್ಣ ನಿಯಂತ್ರಣ ತೆಗೆದುಕೊಂಡಿದ್ದು, 5-0 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 2018 ರಲ್ಲಿ ಗೋಲ್ಡ್ ಕೋಸ್ಟ್ನಲ್ಲಿ ಬೆಳ್ಳಿ ಜಯಿಸಿದ ನಂತರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇದು ಅಮಿತ್ ಅವರ ಎರಡನೇ ಪದಕವಾಗಿದೆ.
ಮಹಿಳೆಯರ 48 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲೂ ಭಾರತಕ್ಕೆ ಚಿನ್ನ
2022 ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬಾಕ್ಸಿಂಗ್ನಲ್ಲಿ ಭಾರತಕ್ಕೆ ನೀತು ಘಂಘಾಸ್ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ. ಮಹಿಳೆಯರ 48 ಕೆಜಿ ಫೈನಲ್ನಲ್ಲಿ ಇಂಗ್ಲೆಂಡ್ನ ಡೆಮಿ-ಜೇಡ್ ಅವರನ್ನು ಸೋಲಿಸಿದ ಅವರು ಚಿನ್ನದ ಪದಕ ಗೆದ್ದರು.
Next Story