ಕಾಮನ್ವೆಲ್ತ್ ಮಹಿಳೆಯರ ಹಾಕಿ: ನ್ಯೂಝಿಲೆಂಡ್ ಮಣಿಸಿ ಕಂಚಿನ ಪದಕ ಗೆದ್ದ ಭಾರತ

Photo: PTI
ಬರ್ಮಿಂಗ್ಹ್ಯಾಮ್ : ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನ ಮಹಿಳೆಯರ ಹಾಕಿಯಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ ಭಾರತ 2-1 ಗೋಲುಗಳಿಂದ ನ್ಯೂಝಿಲೆಂಡ್ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿದೆ.
ಪಂದ್ಯ ಮುಗಿಯಲು ಕೇವಲ 17 ಸೆಕೆಂಡುಗಳು ಇರುವಾಗ ನ್ಯೂಜಿಲೆಂಡ್ ತಂಡವು ಒಂದು ಗೋಲ್ ಹಾಕುವ ಮೂಲಕ ಅಂಕವನ್ನು ಸಮಗೊಳಿಸಿತ್ತು. ಆದ್ದರಿಂದ ಪಂದ್ಯವು ಪೆನಾಲ್ಟಿ ಶೂಟೌಟ್ ಅನಿವಾರ್ಯವಾಗಿತ್ತು. ಇದಕ್ಕೂ ಮುನ್ನ ಕಂಚಿನ ಪದಕಕ್ಕಾಗಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ 3ನೇ ಕ್ವಾರ್ಟರ್ ಅಂತ್ಯದ ನಂತರ ನ್ಯೂಜಿಲೆಂಡ್ ವಿರುದ್ಧ 1-0 ಮುನ್ನಡೆ ಸಾಧಿಸಿತ್ತು.
Next Story