ಉಡುಪಿಯಲ್ಲಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

ಉಡುಪಿ, ಆ.7: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ, ನಿಕ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮತ್ತು ಉಡುಪಿ ಪ್ರವಾಸೋಧ್ಯಮ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜ್ಯ ಮಟ್ಟದ ಕಲರ್ಸ್ ಅಫ್ ಶ್ರೀಕೃಷ್ಣ ಲೀಲೋತ್ಸವ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪ್ರಥಮ ೧೦,೦೦೦ರೂ., ದ್ವಿತೀಯ ೫,೦೦೦ರೂ., ತೃತೀಯ ೩,೦೦೦ರೂ. ಹಾಗು ೫ ಸಮಾಧಾನಕರ ಬಹುಮಾನಗಳು, ಆಕರ್ಷಕ ಸ್ಮರಣಿಕೆ, ವಿಶೇಷ ಉಡುಗೊರೆ ನೀಡಲಾಗುವುದು. ಪ್ರತಿ ಸ್ಪರ್ಧಿಯು ಗರಿಷ್ಠ ನಾಲ್ಕು ಛಾಯಾಚಿತ್ರ ಗಳನ್ನು ಕಳುಹಿಸಬಹುದು. ಒಂದು ಛಾಯಾಚಿತ್ರದ ಗಾತ್ರ ಗರಿಷ್ಠ ೪ಎಂಬಿಗಿಂತ ಹೆಚ್ಚು ಮೀರಬಾರದು. ಮೊಬೈಲ್‌ನಲ್ಲಿ ತೆಗೆದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ. ಇಮೇಲ್ ಮೂಲಕ ಕಳುಹಿಸುವಾಗ ತಮ್ಮ ಭಾವಚಿತ್ರ, ಹೆಸರು, ವಿಳಾಸ, ದೂರವಾಣಿ ಹಾಗೂ ನೋಂದಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. ಉಡುಪಿಯ ರಥಬೀದಿಯಲ್ಲಿ ಆ.೨೦ರಂದು ನಡೆಯುವ ವಿಟ್ಟಪಿಂಡಿಯ ದಿನ ಸೆರೆಹಿಡಿದ ಛಾಯಾಚಿತ್ರಗಳು ಮಾತ್ರ. ನೋಂದಾಯಿಸಲು ಆ.೧೭ ಕೊನೆಯ ದಿನ. ಛಾಯಾಚಿತ್ರವನ್ನು ಕಳುಹಿಸಲು ಆ.೩೧ ಕೊನೆಯ ದಿನ. ಫಲಿತಾಂಶವನ್ನು ಸೆ.೯ರಂದು ಪ್ರಕಟಿಸಲಾಗುವುದು.
ಛಾಯಾಚಿತ್ರಗಳನ್ನು ಕಳಿಸಬೇಕಾದ ಇಮೈಲ್ :salonskpagmail.com. ಮೊಬೈಲ್ ಸಂಪರ್ಕ: ೭೨೦೪೧೪೬೩೬೮, ೯೭೨ ೫೨೩೬೩, ೯೯೬೪೬ ೬೮೩೦೪. ೯೯೦೦೪ ೦೭೪೭೪ ಎಂದು ಪ್ರಕಟಣೆ ತಿಳಿಸಿದೆ.