ಕಾಪು ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಪ್ರಕರಣ ದಾಖಲು

ಕಾಪು, ಆ.8: ಕಾಪು ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು ಮೂರು ಕಾಣಿಕೆ ಡಬ್ಬಿ ಕಳವು ಮಾಡಿರುವ ಘಟನೆ ರವಿವಾರ ನಡೆದಿದೆ.
ದೇವಸ್ಥಾನದ ಸೆಕ್ಯೂರಿಟಿ ಹನುಮಂತ ಬೆಳಗಿನ ಜಾವ 3 ಗಂಟೆಯವರೆಗೂ ದೇವಸ್ಥಾನದ ಸುತ್ತಲೂ ತಿರುಗಾಡಿಕೊಂಡು, ಬಳಿಕ ವಿಶ್ರಾಂತಿಗಾಗಿ ದೇವಸ್ಥಾನದ ಮುಂದೆ ಇರುವ ಜಗುಲಿಯಲ್ಲಿ ಕುಳಿತುಕೊಂಡಿದ್ದರು. ಮತ್ತೆ ಬೆಳಗಿನ ಜಾವ 4.30ರ ವೇಳೆಗೆ ಎದ್ದು ದೇವಸ್ಥಾನದ ಒಳಗೆ ತಿರುಗಾಡುತ್ತಿರುವಾಗ ದೇವಸ್ಥಾನದ ಒಳಗಿದ್ದ 3 ಕಾಣಿಕೆ ಹುಂಡಿಗಳು ಕಾಣುತ್ತಿರಲಿಲ್ಲ ಎನ್ನಲಾಗಿದೆ.
ಈ ಮಧ್ಯೆ ದೇವಸ್ಥಾನದ ಪ್ರಾಂಗಣದ ಮುಖ್ಯದ್ವಾರದ ಬೀಗವನ್ನು ಒಡೆದು ಒಳ ಪ್ರವೇಶಿಸಿದ ದುಷ್ಕರ್ಮಿಗಳು, ಮೂರು ಹುಂಡಿಗಳಲ್ಲಿನ ಹಣ ಕಳವು ಮಾಡಲು ಪ್ರಯತ್ನಿಸಿದ್ದು, ಸ್ವಲ್ಪ ಹಣವನ್ನು ತೆಗೆದುಕೊಂಡು ಉಳಿದ ಹಣವನ್ನು ಹುಂಡಿ ಸಮೇತ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಬಿಟ್ಟು ಹೋಗಿವುದಾಗಿ ದೂರಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story