ಬೈಂದೂರು: ಕಾಲುಸಂಕದಿಂದ ಬಿದ್ದು ವಿದ್ಯಾರ್ಥಿನಿ ನೀರುಪಾಲು

ಬೈಂದೂರು, ಆ.8: ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಬಾಲಕಿ ಕಾಲು ಸಂಕ ದಾಟುತ್ತಿದ್ದ ವೇಳೆ ಆಯ ತಪ್ಪಿ ಬಿದ್ದು ನೀರು ಪಾಲಾಗಿರುವ ಘಟನೆ ಇಂದು ಸಂಜೆ ವೇಳೆ ಬೀಜಮಕ್ಕಿ ಎಂಬಲ್ಲಿ ನಡೆದಿದೆ.
ನೀರುಪಾಲಾಗಿರುವ ವಿದ್ಯಾರ್ಥಿನಿಯನ್ನು ಬೊಳಂಬಳ್ಳಿಯ ಮಕ್ಕಿಮನೆಯ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿ ಪುತ್ರಿ ಸನ್ನಿಧಿ (7) ಎಂದು ಗುರುತಿಸಲಾಗಿದೆ. ನೀರು ಪಾಲಾಗಿರುವ ಬಾಲಕಿಗೆ ತೀವ್ರ ಹುಡುಕಾಟ ಮುಂದುವರಿದಿದೆ.
ಚಪ್ಪರಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಸನ್ನಿಧಿ ಸಂಜೆ ಶಾಲೆ ಬಿಟ್ಟು ಮನೆಗೆ ಹೋಗುವಾಗ ದಾರಿ ಮಧ್ಯೆ ಸಿಗುವ ಕಾಲು ಸಂಕ ದಾಟುತ್ತಿದ್ದು, ಈ ವೇಳೆ ಆಕೆ ಆಯಾ ತಪ್ಪಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾಳೆಂದು ತಿಳಿದುಬಂದಿದೆ.
ಸ್ಥಳಕ್ಕೆ ಶಾಸಕ ಸುಕುಮಾರ್ ಶೆಟ್ಟಿ, ತಹಶೀಲ್ದಾರ್ ಕಿರಣ್ ಗೋರಯ್ಯ, ಬೈಂದೂರು ಎಸ್ಸೈ ಪವನ್ ನಾಯಕ್ ಮೊದಲಾದವರು ಆಗಮಿಸಿದ್ದಾರೆ.

Next Story