ತಿರಂಗಾ DP ಬದಲಾಯಿಸುವ ಪ್ರಧಾನಿ ಕರೆಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಆರೆಸ್ಸೆಸ್: ಬಿ.ಕೆ.ಹರಿಪ್ರಸಾದ್ ಕಿಡಿ

ಬೆಂಗಳೂರು, ಆ.8: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದಡಿ, ಪ್ರತಿಯೊಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿನ ‘ಡಿಪಿ’ಯಲ್ಲಿ ರಾಷ್ಟ್ರಧ್ವಜ ಅಳವಡಿಸುವಂತೆ ಕರೆ ನೀಡಿದ್ದಾರೆ. ಆದರೆ, ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್ (RSS) ಡಿಪಿಯಲ್ಲಿ ರಾಷ್ಟ್ರಧ್ವಜ ಕಾಣದಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತಿರಂಗಾ DP ಬದಲಿಸುವ ಪ್ರಧಾನಿ ಕರೆ RSSಗೆ ಅನ್ವಯಿಸುವುದಿಲ್ಲವೇ: ಕಾಂಗ್ರೆಸ್ ಪ್ರಶ್ನೆ
''ಆರೆಸೆಸ್ಸ್ ತ್ರಿವರ್ಣ ಧ್ವಜಕ್ಕೆ ಗೌರವ ನೀಡಿದ ಇತಿಹಾಸವೇ ಇಲ್ಲ. ತಿರಂಗಾವನ್ನು ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರವಾಗಿ ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಕರೆಗೆ ಆರೆಸೆಸ್ಸ್ ಕವಡೆ ಕಾಸಿನ ಕಿಮ್ಮತ್ತೇ ಕೊಟ್ಟಿಲ್ಲ. ಡಿಪಿಯಲ್ಲಿ ತಿರಂಗಾ ಧ್ವಜ ಹಾಕದೆ, ಭಾಗವಧ್ವಜದ ಮೇಲೆ ಎಂದಿನ ತನ್ನ ವ್ಯಾಮೋಹ ಪ್ರದರ್ಶನ ಮಾಡಿದೆ'' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.
ಇನ್ನು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, ಮೋದಿಯವರು ‘ಹರ್ ಘರ್ ತಿರಂಗ’ ಎನ್ನುತ್ತಾರೆ. ಎಲ್ಲರ ಡಿಪಿಯಲ್ಲಿ ತ್ರಿವರ್ಣ ಧ್ವಜ ಹಾಕಿಕೊಳ್ಳುವಂತೆ ಸೂಚಿಸುತ್ತಾರೆ. ಆದರೆ ಆರೆಸೆಸ್ಸ್‍ನ ಸಾಮಾಜಿಕ ಜಾಲತಾಣದ ಯಾವುದೇ ಖಾತೆಯಲ್ಲೂ ತ್ರಿವರ್ಣ ಧ್ವಜವೇ ಇಲ್ಲ. ತಿರಂಗ ಅಭಿಯಾನ ಆರೆಸೆಸ್ಸ್‍ಗೆ ಅನ್ವಯವಾಗುವುದಿಲ್ಲವೆ? ಆರೆಸೆಸ್ಸ್ ತ್ರಿವರ್ಣ ಧ್ವಜದ ವಿರೋಧಿ ಎಂಬುದು ಮತ್ತೊಮ್ಮೆ ಸತ್ಯವೆಂದಾಯಿತ್ತಲ್ಲವೆ? ಎಂದು ಕಿಡಿಗಾರಿದ್ದಾರೆ.
RSS ತ್ರಿವರ್ಣ ಧ್ವಜಕ್ಕೆ ಗೌರವ ನೀಡಿದ ಇತಿಹಾಸವೇ ಇಲ್ಲ.
— Hariprasad.B.K. (@HariprasadBK2) August 8, 2022
ತಿರಂಗಾವನ್ನ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರವಾಗಿ ಬದಲಾಯಿಸಲು ಪ್ರಧಾನಿ @narendramodi ಕೊಟ್ಟ ಕರೆಗೆ RSS ಕವಡೆ ಕಾಸಿನ ಕಿಮ್ಮತ್ತೇ ಕೊಟ್ಟಿಲ್ಲ.
ಡಿಪಿಯಲ್ಲಿ ತಿರಂಗಾ ಧ್ವಜ ಹಾಕದೆ, ಭಾಗವಧ್ವಜದ ಮೇಲೆ ಎಂದಿನ ತನ್ನ ವ್ಯಾಮೋಹ ಪ್ರದರ್ಶನ ಮಾಡಿದೆ. pic.twitter.com/9YdRuLIZJy