ಪಶ್ಚಿಮಬಂಗಾಳ: ರಿಕ್ಷಾ-ಬಸ್ ಢಿಕ್ಕಿ; 9 ಮಂದಿ ಸಾವು
Photo: NDTV
ಕೋಲ್ಕತ್ತಾ, ಆ. 9: ಪಶ್ಚಿಮಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ-60ರಲ್ಲಿ ಮಂಗಳವಾರ ಅಪರಾಹ್ನ ಆಟೋ ರಿಕ್ಷಾ ಹಾಗೂ ರಾಜ್ಯ ರಸ್ತೆ ಸಾರಿಗೆಯ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 8 ಮಹಿಳಾ ರೈತ ಕಾರ್ಮಿಕರು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.
ರಾಮ್ಪುರ್ಹಾತ್ ಸಮೀಪದ ಮಲ್ಲಾರ್ಪುರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಜನರಿಂದ ತುಂಬಿದ್ದ ಆಟೋ ರಿಕ್ಷಾ ಹಾಗೂ ದಕ್ಷಿಣ ಬಂಗಾಳ ರಾಜ್ಯ ರಸ್ತೆ ಸಾರಿಗೆ ನಿಗಮ (ಎಸ್ಬಿಎಸ್ಟಿಸಿ) ಬಸ್ ಢಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಕ್ಷಾದಲ್ಲಿದ 8 ಮಂದಿ ಪ್ರಯಾಣಿಕರು ಹಾಗೂ ಚಾಲಕ ಸೇರಿದಂತೆ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಬಿರ್ಭೂಮ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ನಾಗೇಂದ್ರ ನಾಥ್ ತ್ರಿಪಾಠಿ ತಿಳಿಸಿದ್ದಾರೆ.
ಮಹಿಳೆಯರು ಹೊಲದಿಂದ ರಿಕ್ಷಾದಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಬಸ್ಸು ದುರ್ಗಾಪುರದಿಂದ ಆರಾಮ್ಬಾಗ್ಗೆ ತೆರಳುತ್ತಿತ್ತು.
Next Story