ನಾನು ಯಾರನ್ನಾದರೂ ನೋಯಿಸಿದ್ದರೆ, ನನಗೆ ಆ ಕುರಿತು ಪಶ್ಚಾತ್ತಾಪವಿದೆ: ʼಬಹಿಷ್ಕಾರʼದ ಕುರಿತು ಆಮಿರ್ ಖಾನ್ ಹೇಳಿಕೆ

ಹೊಸದಿಲ್ಲಿ: ಬಾಲಿವುಡ್ ನ ಖ್ಯಾತ ನಟ ಆಮಿರ್ ಖಾನ್ ತಮ್ಮ ಹೊಸ ಸಿನಿಮಾ ಲಾಲ್ ಸಿಂಗ್ ಛಡ್ಡಾದ ಬಿಡುಗಡೆ ಕಾರ್ಯಕ್ರಮದಲ್ಲಿ ವ್ಯಸ್ತರಾಗಿದ್ದಾರೆ. ಈ ನಡುವೆ ಸಿನಿಮಾವನ್ನು ಬಹಿಷ್ಕರಿಸಲು ಹಲವು ಬಲಪಂಥೀಯ ಗುಂಪುಗಳು ಕರೆ ನೀಡುತ್ತಿರುವ ಮಧ್ಯೆ ಆಮಿರ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿಲುವನ್ನು ತಿಳಿಸಿದ್ದಾರೆ. ನಾನು ಯಾರನ್ನಾದರೂ ನೋಯಿಸಿದ್ದರೆ, ನನಗೆ ಆ ಕುರಿತು ಪಶ್ಚಾತ್ತಾಪವಿದೆ ಎಂದು ಹೇಳಿದ್ದಾರೆ.
ANI ವರದಿ ಮಾಡಿರುವ ಪ್ರಕಾರ, ನಾನು ಯಾರನ್ನಾದರೂ ತಿಳಿದೂ ನೋಯಿಸಿದ್ದರೆ ನಾನು ಅದಕ್ಕಾಗಿ ಪಶ್ಚಾತ್ತಾಪಿಸುತ್ತೇನೆ. ನನಗೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಇನ್ನು ಯಾರಾದರೂ ಈ ಸಿನಿಮಾವನ್ನು ನೋಡುವುದಿಲ್ಲ ಎಂದಾದರೆ ಅದನ್ನೂ ನಾನು ಗೌರವಿಸುತ್ತೇನೆ ಎಂದು ಆಮಿರ್ ಖಾನ್ ಹೇಳಿಕೆ ನೀಡಿದ್ದಾರೆ. ಅದ್ವೈತ್ ಚಂದನ್ ನಿರ್ದೇಶಿಸಿದ ಲಾಲ್ ಸಿಂಗ್ ಚಡ್ಡಾ, 1994 ರ ಹಾಲಿವುಡ್ ಚಲನಚಿತ್ರ ಫಾರೆಸ್ಟ್ ಗಂಪ್‌ನ ಅಧಿಕೃತ ರಿಮೇಕ್ ಆಗಿದೆ.
ಲಾಲ್ ಸಿಂಗ್ ಚಡ್ಡಾ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಮೋನಾ ಸಿಂಗ್ ಮತ್ತು ನಾಗ ಚೈತನ್ಯ ಕೂಡ ನಟಿಸಿದ್ದಾರೆ ಮತ್ತು ಇದು 15 ವರ್ಷಗಳಿಂದ ಪ್ರಗತಿಯಲ್ಲಿದ್ದ ಕೆಲಸವಾಗಿತ್ತು. ಈ ಚಿತ್ರವನ್ನು ಅಮೀರ್ ಖಾನ್ ಅವರ ಅಮೀರ್ ಖಾನ್ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಸಹ-ನಿರ್ಮಾಣ ಮಾಡಿದ್ದಾರೆ.