‘ವಂದೇ ಮಾತರಂ’ ಮರಳ ಶಿಲ್ಪ ಕಲಾಕೃತಿ ರಚನೆ

ಉಡುಪಿ, ಆ.11: ೭೫ನೇ ಸ್ವಾತಂತ್ರ್ಯಅಮೃತ ಮಹೋತ್ಸವದ ಅಂಗವಾಗಿ ಮತ್ತು ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜದ ಆಚರಣೆಯ ಸಂಭ್ರಮವನ್ನು ಸಾರುವ ಮರಳು ಶಿಲ್ಪ ಕಲಾಕೃತಿಯನ್ನು ಗುರುವಾರ ಮಲ್ಪೆ ಕಡಲ ಕಿನಾರೆಯಲ್ಲಿ ರಚಿಸಲಾಯಿತು.
ಸ್ಯಾಂಡ್ ಥೀಂ ಉಡುಪಿಯ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್. ‘ವಂದೇ ಮಾತರಂ’ ಧ್ಯೇಯ ದೊಂದಿಗೆ ಈ ಕಲಾಕೃತಿಯನ್ನು ರಚಿಸಿದರು. ಈ ಕಲಾಕೃತಿಯು ಬೀಚ್‌ಗೆ ಆಗಮಿಸುವ ಪ್ರವಾಸಿಗರ ಗಮನ ಸೆಳೆಯುತ್ತಿದೆ.
Next Story