Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮುಂದಿನ ಸಿಜೆಐ ಆಗಿ ಯು.ಯು.ಲಲಿತ್ ನೇಮಕದ...

ಮುಂದಿನ ಸಿಜೆಐ ಆಗಿ ಯು.ಯು.ಲಲಿತ್ ನೇಮಕದ ಕುರಿತು ಮಾಡುತ್ತಿರುವ ಟೀಕೆಗೆ ಹುರುಳಿಲ್ಲ, ಏಕೆ?

ಉಮಂಗ್ ಪೋದ್ದಾರ್ (Scroll.in)ಉಮಂಗ್ ಪೋದ್ದಾರ್ (Scroll.in)11 Aug 2022 8:28 PM IST
share
ಮುಂದಿನ ಸಿಜೆಐ ಆಗಿ ಯು.ಯು.ಲಲಿತ್ ನೇಮಕದ ಕುರಿತು ಮಾಡುತ್ತಿರುವ ಟೀಕೆಗೆ ಹುರುಳಿಲ್ಲ, ಏಕೆ?

ನಿರ್ಗಮನಗೊಳ್ಳುತ್ತಿರುವ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ.ರಮಣ ಅವರು ಆ.4ರಂದು ತನ್ನ ಉತ್ತರಾಧಿಕಾರಿಯಾಗಿ ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶ ಯು.ಯು.ಲಲಿತ್ ಅವರ ಹೆಸರನ್ನು ಶಿಫಾರಸು ಮಾಡಿದ ಬೆನ್ನಿಗೇ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳ ಮಹಾಪೂರವೇ ಹರಿದುಬಂದಿತ್ತು. 

ಗುಜರಾತಿನ ಗೃಹಸಚಿವರಾಗಿದ್ದಾಗ ಕಾನೂನುಬಾಹಿರ ಹತ್ಯೆಗಳ ಸೂತ್ರಧಾರರಾಗಿದ್ದರು ಎಂಬ ಆರೋಪವನ್ನು ಹೊತ್ತಿದ್ದ ಹಾಲಿ ಕೇಂದ್ರ ಸಚಿವ ಅಮಿತ್ ಶಾ ಅವರ ಪರವಾಗಿ ನ್ಯಾಯಾಲಯದಲ್ಲಿ ಲಲಿತ್ ವಾದಿಸಿದ್ದರು ಎಂದು ಹಲವಾರು ಬಳಕೆದಾರರು ಬೆಟ್ಟು ಮಾಡಿದ್ದರು. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವು ಮೇ 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿದ ಮೂರು ತಿಂಗಳ ಬಳಿಕ ಲಲಿತ್ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು ಎಂಬ ಅಂಶದ ಬಗ್ಗೆಯೂ ಅವರು ಗಮನ ಸೆಳೆದಿದ್ದರು.

ಆದರೆ ಮಾತನಾಡಿಸಿದ ಕಾನೂನುತಜ್ಞರು ಈ ವಾದಗಳನ್ನು ಒಮ್ಮತದಿಂದ ತಿರಸ್ಕರಿಸಿದ್ದಾರೆ. ಲಲಿತ್ ನ್ಯಾಯಪರ ನ್ಯಾಯಾಧೀಶರಾಗಿದ್ದಾರೆ ಮತ್ತು ಅವರ ಈವರೆಗಿನ ಸೇವಾವಧಿಯಲ್ಲಿ ಅವರ ಸಮದರ್ಶಿತ್ವದ ಬಗ್ಗೆ ಯಾವುದೇ ಪ್ರಶ್ನೆಗಳನ್ನೆತ್ತಲಾಗಿಲ್ಲ ಎಂದು ಅವರು ಹೇಳಿದರು.

ಕಾನೂನು ಪ್ರಾತಿನಿಧ್ಯದ ನೈತಿಕತೆ:

2014,ಆಗಸ್ಟ್ ನಲ್ಲಿ ಪದೋನ್ನತಿಗೆ ಮುನ್ನ ಲಲಿತ್ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿ ಹೆಸರು ಮಾಡಿದ್ದರು. ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ವಿ.ಕೆ.ಸಿಂಗ್,ಮಾಜಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ನಟ ಸಲ್ಮಾನ್ ಖಾನ್ ರಂತಹ ಹಲವಾರು ಗಣ್ಯ ಕಕ್ಷಿದಾರರನ್ನು ಲಲಿತ್ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದರು.

ಆದಾಗ್ಯೂ ಅಮಿತ್ ಶಾ ಪರ ವಾದಿಸಿದ್ದ ಪ್ರಕರಣಗಳು ಹೆಚ್ಚಿನ ಗಮನ ಪಡೆದುಕೊಂಡಿದ್ದವು. 2005-06ರಲ್ಲಿ ಗುಜರಾತಿನ ಗೃಹಸಚಿವರಾಗಿದ್ದಾಗ ಶಾ ಗ್ಯಾಂಗ್‌ಸ್ಟರ್ ಗಳಾಗಿದ್ದ ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿ ರಾಮ ಪ್ರಜಾಪತಿ ಅವರ ಕಾನೂನುಬಾಹಿರ ಹತ್ಯೆಗಳ ಸಂಚು ರೂಪಿಸಿದ್ದರು ಎಂಬ ಆರೋಪದಲ್ಲಿ ಈ ಪ್ರಕರಣಗಳು ದಾಖಲಾಗಿದ್ದವು. 2010ರಲ್ಲಿ ಸೊಹ್ರಾಬುದ್ದೀನ್ ಶೇಖ್ ಹತ್ಯೆ ಪ್ರಕರಣದಲ್ಲಿ ಶಾರನ್ನು ಬಂಧಿಸಲಾಗಿತ್ತು ಮತ್ತು ಸಂಕ್ಷಿಪ್ತ ಅವಧಿಗೆ ಜೈಲಿಗೆ ಕಳುಹಿಸಲಾಗಿತ್ತು.

ಲಲಿತ್ ಅವರು ಶಾ ಅಥವಾ ಇನ್ಯಾವುದೋ ಕಕ್ಷಿದಾರರನ್ನು ಪ್ರತಿನಿಧಿಸಿದ್ದಕ್ಕಾಗಿ ಅವರನ್ನು ಟೀಕಿಸುವುದು ಅನ್ಯಾಯ ಎನ್ನುತ್ತಾರೆ ವಕೀಲರು. ವಕೀಲರು ಪ್ರತಿನಿಧಿಸುವ ಕಕ್ಷಿದಾರರನ್ನು ಆಧಾರವಾಗಿಟ್ಟುಕೊಂಡು ಅವರ ಬಗ್ಗೆ ನಿರ್ಣಯಿಸಬಾರದು. ಅವರು ಪ್ರಕರಣದಲ್ಲಿಯ ಅಂಶಗಳ ಮೇಲೆ ಕಕ್ಷಿದಾರರನ್ನು ಪ್ರತಿನಿಧಿಸುತ್ತಾರೆ ಮತ್ತು ವೈಯಕ್ತಿಕವಾಗಿ ಅವರನ್ನು ರಕ್ಷಿಸುವುದಿಲ್ಲ ಎಂದು ಹೇಳಿದ ಹಿರಿಯ ನ್ಯಾಯವಾದಿ ಹಾಗೂ ಪಾಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಅಂಜನಾ ಪ್ರಕಾಶ್, ವಕೀಲರಾಗಿ ನಿಮಗೆ ಬರುವ ಎಲ್ಲ ಪ್ರಕರಣಗಳನ್ನು ನೀವು ಸ್ವೀಕರಿಸಬೇಕಾಗುತ್ತದೆ ಎಂದರು.

ಇದನ್ನು ಸಾಮಾನ್ಯವಾಗಿ ‘ಕ್ಯಾಬ್ ರ್ಯಾಂಕ್ ರೂಲ್’ ಎಂದು ಕರೆಯಲಾಗುತ್ತದೆ. ಹೇಗೆ ಓರ್ವ ಟ್ಯಾಕ್ಸಿ ಚಾಲಕನು ಪ್ರಯಾಣಿಕರನ್ನು ನಿರಾಕರಿಸುವುದಿಲ್ಲವೋ ಹಾಗೆಯೇ ವಕೀಲರು ತನ್ನ ಬಳಿಗೆ ಬರುವ ಎಲ್ಲ ಪ್ರಕರಣಗಳನ್ನು ಒಪ್ಪಿಕೊಳ್ಳಬೇಕು ಎನ್ನುವುದು ಈ ನಿಯಮದ ಅರ್ಥ. ವಕೀಲರ ನಡವಳಿಕೆಯನ್ನು ನಿಯಂತ್ರಿಸುವ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಗಳಲ್ಲಿ ವಕೀಲರು ತಮಗೆ ಬರುವ ಯಾವುದೇ ಪ್ರಕರಣವನ್ನು ಒಪ್ಪಿಕೊಳ್ಳಲೇಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಓರ್ವ ವ್ಯಕ್ತಿಯು ತಪ್ಪಿತಸ್ಥನೆಂದು ಸಾಬೀತಾಗುವವರೆಗೆ ಆತ ನಿರಪರಾಧಿಯಾಗಿರುತ್ತಾನೆ ಮತ್ತು ವಕೀಲರು ಬೇರೆ ರೀತಿಯಲ್ಲಿ ಭಾವಿಸಬಾರದು ಎನ್ನುವುದು ಈ ನಿಯಮಕ್ಕೆ ಆಧಾರವಾಗಿರುವ ತತ್ತ್ವವಾಗಿದೆ.

ಅಂತಿಮವಾಗಿ ನಿರ್ಧರಿಸಬೇಕಾದವರು ನ್ಯಾಯಾಧೀಶರಾಗಿದ್ದಾರೆ ಮತ್ತು ಪ್ರಜೆಗಳ ವಿರುದ್ಧದ ಪ್ರಕರಣವನ್ನು ಸಾಬೀತು ಮಾಡುವುದು ಸರಕಾರ ಅಥವಾ ಪ್ರಾಸಿಕ್ಯೂಷನ್ನ ಕೆಲಸವಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ದುಷ್ಯಂತ ದವೆ ಹೇಳಿದರು.

ಕ್ಯಾಬ್ ರ್ಯಾಂಕ್ ರೂಲ್ ವಕೀಲರಿಗೆ ನೈತಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಕೆಲವರು ಟೀಕಿಸಿದ್ದರೆ,ಯಾರಿಗೂ ಕಾನೂನು ಪ್ರಾತಿನಿಧ್ಯವು ನಿರಾಕರಣೆಯಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಲು ಈ ನಿಯಮವು ಅಗತ್ಯವಾಗಿದೆ ಎಂದು ಹಲವರು ನಂಬಿದ್ದಾರೆ.

ಕ್ಯಾಬ್ ರ್ಯಾಂಕ್ ರೂಲ್ ಅನ್ನು ಒಪ್ಪದ ವಕೀಲರು ಸಹ ನ್ಯಾ.ಲಲಿತ್ ಅವರನ್ನು ಅವರ ಕಕ್ಷಿದಾರರ ಆಧಾರದಲ್ಲಿ ನಿರ್ಣಯಿಸುವುದು ಅನ್ಯಾಯ ಎಂದು ಹೇಳಿದ್ದಾರೆ. ಕಕ್ಷಿದಾರರಿಗೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಎನ್ನುವ ಏಕೈಕ ಕಾರಣಕ್ಕೆ ಅವರನ್ನು ಪ್ರತಿನಿಧಿಸುವುದು ಅಪಚಾರವಾಗುತ್ತದೆ ಎನ್ನುವುದು ತನ್ನ ನಂಬಿಕೆ, ಹೀಗಾಗಿ ಕ್ಯಾಬ್ ರ್ಯಾಂಕ್ ರೂಲ್ ಗೆ ತಾನು ತಾತ್ವಿಕವಾಗಿ ವಿರೋಧಿಯಾಗಿದ್ದೇನೆ ಎಂದು ಹೇಳಿದ ಹಿರಿಯ ನ್ಯಾಯವಾದಿ ಸಂಜಯ್ ಘೋಷ್ ಅವರು, ಲಲಿತ್ ಅವರು ಅಮಿತ್ ಶಾರನ್ನು ಪ್ರತಿನಿಧಿಸಿದ್ದರು ಎಂಬ ಮಾತ್ರಕ್ಕೆ ಅವರನ್ನು ಟೀಕಿಸುವುದು ಮೂರ್ಖತನವಾಗುತ್ತದೆ ಮತ್ತು ಬಾಲಿಶವಾಗುತ್ತದೆ ಎಂದು ಹೇಳಿದರು. ಯಶಸ್ವಿ ವಕೀಲನೋರ್ವ ಎಲ್ಲ ವಿಧಗಳ ಕಕ್ಷಿದಾರರನ್ನು ಪ್ರತಿನಿಧಿಸುತ್ತಾನೆ ಎಂದರು.

ತಾನಾಗಿದ್ದರೆ ಅಮಿತ್ ಶಾರನ್ನು ಪ್ರತಿನಿಧಿಸುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಪ್ರತಿಪಾದಕ ಪ್ರಶಾಂತ್ ಭೂಷಣ್ ಅವರೂ,‌ ಆದಾಗ್ಯೂ ಓರ್ವ ವ್ಯಕ್ತಿ ಗಂಭೀರ ಅಪರಾಧಗಳ ತಪ್ಪಿತಸ್ಥನಾಗಿದ್ದಾನೆ ಎಂದು ಇತರರು ಭಾವಿಸಿದ್ದರೂ ಆತನನ್ನು ಪ್ರತಿನಿಧಿಸಿದ್ದಕ್ಕಾಗಿ ಕ್ರಿಮಿನಲ್ ವಕೀಲರನ್ನು ನೀವು ದೂಷಿಸುವಂತಿಲ್ಲ ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿ

ಸಾಮಾಜಿಕ ಜಾಲತಾಣಗಳಲ್ಲಿ ಲಲಿತ್ ವಿರುದ್ಧದ ಟೀಕೆಗಳು ಅವರ ಕಕ್ಷಿದಾರರ ಆಯ್ಕೆಯನ್ನು ಮೀರಿವೆ. ಹಲವರು 2014ರಲ್ಲಿ ಲಲಿತ್ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಿದಾಗಿನ ಸಂದರ್ಭಗಳನ್ನು ಮರುಪರಿಶೀಲಿಸಿದ್ದಾರೆ.

ಆ ವರ್ಷದ ಆದಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ನ್ಯಾಯಾಧೀಶರಾಗಿ ಪದೋನ್ನತಿಗಾಗಿ ನಾಲ್ವರ ಹೆಸರುಗಳನ್ನು ಶಿಫಾರಸು ಮಾಡಿತ್ತು. ಅವರಲ್ಲಿ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಓರ್ವರಾಗಿದ್ದರು. ನೂತನ ಚುನಾಯಿತ ಬಿಜೆಪಿ ಸರಕಾರವು ಮೂರು ಹೆಸರುಗಳಿಗೆ ಹಸಿರು ನಿಶಾನೆ ತೋರಿಸಿದ್ದರೂ ಸುಬ್ರಮಣಿಯಂ ಅವರ ಪದೋನ್ನತಿಯನ್ನು ತಡೆಹಿಡಿದಿತ್ತು. 

ಸುಬ್ರಮಣಿಯಂ ಅವರು ಕಾರ್ಪೊರೇಟ್ ಸಂಬಂಧಗಳನ್ನು ಹೊಂದಿದ್ದಾರೆ ಮತ್ತು ಸಾಲಿಸಿಟರ್ ಜನರಲ್ ಆಗಿ ಕೆಲವು ಪ್ರಕರಣಗಳಲ್ಲಿ ಅನುಚಿತವಾಗಿ ವರ್ತಿಸಿದ್ದರು ಎಂಬ ಆರೋಪದ ಛಾಯೆಯನ್ನು ಹೊಂದಿದ್ದ ಪ್ರತಿಕೂಲ ಗುಪ್ತಚರ ವರದಿಗಳು ಇದಕ್ಕೆ ಕಾರಣವಾಗಿವೆ ಎಂದು ಮಾಧ್ಯಮ ವರದಿಗಳು ಹೇಳಿದ್ದವು. ಆದಾಗ್ಯೂ ಸೊಹ್ರಾಬುದ್ದೀನ್ ಶೇಖ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ಅಮಿಕಸ್ ಕ್ಯುರೆ ಆಗಿದ್ದ ಸುಬ್ರಮಣಿಯಂ ಅವರು ಅಮಿತ್ ಶಾ ಬಂಧನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಕ್ಕಾಗಿ ಅವರನ್ನು ಶಿಕ್ಷಿಸಲಾಗುತ್ತಿದೆ ಎಂಬ ವ್ಯಾಪಕ ಊಹಾಪೋಹಗಳು ಗರಿಗೆದರಿದ್ದವು.

ಸರಕಾರವು ತನ್ನ ನೇಮಕಾತಿಯನ್ನು ಅನುಮೋದಿಸದ ಹಿನ್ನೆಲೆಯಲ್ಲಿ ಸುಬ್ರಮಣಿಯಂ ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗಾಗಿ ತನ್ನ ಒಪ್ಪಿಗೆಯನ್ನು ಹಿಂದೆಗೆದುಕೊಂಡಿದ್ದರು. ಜೂನ್ 2014ರಲ್ಲಿ ಅವರು ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿ ಆಗ ಸಿಜೆಐ ಆಗಿದ್ದ ಆರ್.ಎಂ.ಲೋಧಾ ಅವರಿಗೆ ಪತ್ರ ಬರೆದಿದ್ದರು. ತಾನು ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲ ಎಂಬ ಆತಂಕದಿಂದ ಅದು ತನ್ನ ನೇಮಕಕ್ಕೆ ತಡೆಯೊಡ್ಡಿದೆ ಎಂದು ಸುಬ್ರಮಣಿಯನ್ ಹೇಳಿದ್ದರು. ‌

ಸುಬ್ರಮಣಿಯಂ ಅವರ ನೇಮಕವನ್ನು ಅನುಮೋದಿಸದ್ದಕ್ಕಾಗಿ ನ್ಯಾ.ಲೋಧಾ ಅವರು ಸಹ ಕೇಂದ್ರ ಸರಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು. ಬಳಿಕ ಸುಬ್ರಮಣಿಯಂ ಬದಲಿಗೆ ಲಲಿತ್ ಹೆಸರನ್ನು ಶಿಫಾರಸು ಮಾಡಲಾಗಿತ್ತು ಮತ್ತು ಆಗಸ್ಟ್ 2014ರಲ್ಲಿ ಕೇಂದ್ರ ಸರಕಾರವು ಅದನ್ನು ಅನುಮೋದಿಸಿತ್ತು.  ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಲಲಿತ್ ಹೆಸರನ್ನು ಶಿಫಾರಸು ಮಾಡಿದಾಗ ಸಾಮಾಜಿಕ ಮಾಧ್ಯಮಗಳು ಅವರನ್ನು ಟೀಕಿಸಲು ಈ ಅಂಶಗಳು ಕಾರಣವಾಗಿದ್ದವು.

ಇದು ಮೂರ್ಖತನವಷ್ಟೇ...

ಆದಾಗ್ಯೂ ಲಲಿತ್ ವಿರುದ್ಧದ ಟೀಕೆಗಳನ್ನು ಕಾನೂನು ತಜ್ಞರು ತಿರಸ್ಕರಿಸಿದ್ದಾರೆ. ಇದು ಮೂರ್ಖತನವಷ್ಟೇ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎಂ.ಬಿ.ಲೋಕೂರ್ ಅವರು, ಸುಬ್ರಮಣಿಯಂ ಅವರನ್ನು ಪದೋನ್ನತಿಗೊಳಿಸುವಲ್ಲಿ ವೈಫಲ್ಯವು ತಪ್ಪಾಗಿತ್ತು ನಿಜ,ಆದರೆ ಅದಕ್ಕೂ ನ್ಯಾ.ಲಲಿತ್ ಅವರ ಪದೋನ್ನತಿಗೂ ಯಾವುದೇ ಸಂಬಂಧವಿಲ್ಲ ಎಂದರು.

ಸುಬ್ರಮಣಿಯಂ ಅವರಿಗೆ ಪದೋನ್ನತಿ ದೊರಕದಿರುವುದರಲ್ಲಿ ಲಲಿತ್ ಅವರ ತಪ್ಪಿರಲಿಲ್ಲ ಎಂದು ಹೇಳಿದ ಕಾನೂನು ವಿದ್ವಾಂಸ ಅನುಜ್ ಭುವಾನಿಯಾ ಅವರು,ನ್ಯಾಯಾಂಗ ನೇಮಕಾತಿಗಳು ಪೂರ್ವ ನಿಯೋಜಿತವಾಗಿ ರಾಜಕೀಯ ಪ್ರಕ್ರಿಯೆಯಾಗಿವೆ ಎಂದು ವಿವರಿಸಿದರು.

ಓರ್ವ ವಕೀಲರಾಗಿ ಲಲಿತ್ ಅವರ ಅನುಭವ ನ್ಯಾಯಾಧೀಶರಾಗಿ ಪದೋನ್ನತಿಗೆ ಅವರನ್ನು ಅರ್ಹರನ್ನಾಗಿಸಿತ್ತು ಎಂದು ಅಂಜನಾ ಪ್ರಕಾಶ್ ಹೇಳಿದರು. ತನ್ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಅವಕಾಶವನ್ನು ನೀಡಿರದ ಲಲಿತ್ ಓರ್ವ ಪ್ರಾಮಾಣಿಕ ನ್ಯಾಯಾಧೀಶರಾಗಿದ್ದಾರೆ ಎಂದು ಹಲವಾರು ವಕೀಲರು ಅಭಿಪ್ರಾಯಿಸಿದ್ದಾರೆ. ನ್ಯಾ.ಲಲಿತ್ ಅವರು ಅತ್ಯಂತ ನ್ಯಾಯಪರ, ಸ್ವತಂತ್ರ ಮತ್ತು ಕಠಿಣ ಪರಿಶ್ರಮಿ ನ್ಯಾಯಾಧೀಶರಾಗಿದ್ದಾರೆ. 

ಅವರು ಎಂದಿಗೂ ಯಾರ ವಿರುದ್ಧವೂ ಪಕ್ಷಪಾತವನ್ನು ಪ್ರದರ್ಶಿಸಿಲ್ಲ ಎಂದು ದವೆ ಹೇಳಿದರು. ನ್ಯಾ. ಲಲಿತ್ ಅವರು ಸಿಜೆಐ ಆಗಿ ದುರದೃಷ್ಟವಶಾತ್ ಕೇವಲ 74 ದಿನಗಳ ಅಲ್ಪಾವಧಿಯನ್ನು ಹೊಂದಿರುವುದು ವಿಷಾದನೀಯವಾಗಿದೆ ಎಂದು ನ್ಯಾ.ಲೋಕೂರ್ ಹೇಳಿದರು.

share
ಉಮಂಗ್ ಪೋದ್ದಾರ್ (Scroll.in)
ಉಮಂಗ್ ಪೋದ್ದಾರ್ (Scroll.in)
Next Story
X