ದೇವಸ್ಥಾನಕ್ಕೆ ನುಗ್ಗಿ ಕಳವಿಗೆ ಯತ್ನ

ಗಂಗೊಳ್ಳಿ : ಮರವಂತೆ ಗ್ರಾಮದ ಮಹಾರಾಜಸ್ವಾಮಿ ಶ್ರೀ ವರಹ ದೇವಸ್ಥಾನಕ್ಕೆ ಮಹಿಳೆ ಸೇರಿದಂತೆ ಇಬ್ಬರು ನುಗ್ಗಿ ಕಳವಿಗೆ ಯತ್ನಿಸಿರುವ ಘಟನೆ ಆ.9ರಂದು ಸಂಜೆ ವೇಳೆ ನಡೆದಿದೆ.
ಓರ್ವ ಪುರುಷ ಕೈಯಲ್ಲಿ ಕತ್ತಿಯನ್ನು ಹಿಡಿದು, ಓರ್ವ ಮಹಿಳೆಯೊಂದಿಗೆ ಸೇರಿ ದೇವಸ್ಥಾನದ ಬಾಗಿಲನ್ನು ಒಡೆದು ಗರ್ಭಗುಡಿಯ ಒಳಗೆ ಪ್ರವೇಶಿಸಿ ಕಳ್ಳತನ ಮಾಡಲು ಪ್ರಯತ್ನಿಸಿರುವುದು ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story