ಆಮಿರ್ ಖಾನ್ ರ 'ಲಾಲ್ ಸಿಂಗ್ ಛಡ್ಡಾ' ಚಲನಚಿತ್ರಕ್ಕೆ ಆಸ್ಕರ್ಸ್ ಅಧಿಕೃತ ಪುಟದಿಂದ ವಿಶೇಷ ರೀತಿಯ ಬೆಂಬಲ

Photo: Twitter
ಹೊಸದಿಲ್ಲಿ: ಆಗಸ್ಟ್ 11ರಂದು ಬಿಡುಗಡೆಗೊಂಡ ಆಮಿರ್ ಖಾನ್(Aamir Khan) ಅಭಿನಯದ ಲಾಲ್ ಸಿಂಗ್ ಛಡ್ಡಾ(Laal Singh Chaddha), 1984ರಲ್ಲಿ ತೆರೆಕಂಡ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ಟಾಮ್ ಹ್ಯಾಂಕ್ಸ್ ಅವರ ಫಾರ್ರೆಸ್ಟ್ ಗಂಪ್(Forrest Gump) ಇದರ ಹಿಂದಿ ಅವತರಣಿಕೆಯಾಗಿದೆ. ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಆಸ್ಕರ್ಸ್(Oscars) ಈ ಚಿತ್ರಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿದೆ.
ಆಸ್ಕರ್ಸ್ ಪ್ರಶಸ್ತಿ ನೀಡುವ ದಿ ಅಕಾಡೆಮಿ ತನ್ನ ಸಾಮಾಜಿಕ ಜಾಲತಾಣ ಹ್ಯಾಂಡಲ್ಗಳಲ್ಲಿ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿ ಈ ಭಾರತೀಯ ಚಿತ್ರ ಮೂಲ ಆಸ್ಕರ್ ವಿಜೇತ ಚಿತ್ರದಂತೆಯೇ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಎಂಬುದನ್ನು ತೋರಿಸುವ ಯತ್ನ ನಡೆಸಿದೆ.
ದಿ ಅಕಾಡೆಮಿ ಒಂದು ವೀಡಿಯೋ ಪೋಸ್ಟ್ ಮಾಡಿದ್ದು ಎರಡು ಚಿತ್ರಗಳ ನಡುವಿನ ಹೋಲಿಕೆ ಮಾಡಿದೆ. ಲಾಲ್ ಸಿಂಗ್ ಛಡ್ಡಾದಲ್ಲಿ ಆಮಿರ್ ಮತ್ತು ಕರೀನಾ ಕಪೂರ್ ಖಾನ್ ಅವರ ಜೋಡಿ ಮೂಲ ಚಿತ್ರದ ಕೆಲವೊಂದು ದೃಶ್ಯಗಳನ್ನು ಮತ್ತೆ ಪರಿಣಾಮಕಾರಿಯಾಗಿ ಹೇಗೆ ಮೂಡಿಸಿದೆ ಎಂಬುದನ್ನು ಈ ವೀಡಿಯೋ ತೋರಿಸುತ್ತದೆ.
ಇದನ್ನೂ ಓದಿ: ರಾಜಕೀಯದ ನಂತರ ನಾಗರಿಕ ಸೇವೆಗೆ ಹಿಂತಿರುಗಿದ ಐಎಎಸ್ ಅಧಿಕಾರಿ ಶಾ ಫೈಸಲ್ಗೆ ಹೊಸ ಹುದ್ದೆ
ಈ ವೀಡಿಯೋ ಜೊತೆಗೆ ದಿ ಅಕಾಡೆಮಿ ಹೀಗೆಂದು ಬರೆದಿದೆ- "ತನ್ನ ಸರಳ ಸಹಾಯಕಾರಿ ಗುಣದಿಂದ ವ್ಯಕ್ತಿಯೊಬ್ಬ ಹೇಗೆ ಜಗತ್ತನ್ನು ಬದಲಾಯಿಸುತ್ತಾನೆ ಎಂಬ ಕುರಿತು ರಾಬರ್ಟ್ ಝೆಮೆಕಿಸ್ ಮತ್ತು ಎರಿಕ್ ರೊಥ್ ಅವರ ಅಭೂತಪೂರ್ವ ಕಥೆಯು ಟಾಮ್ ಹ್ಯಾಂಕ್ಸ್ ಅವರು ಖ್ಯಾತಿ ತಂದ ಮುಖ್ಯ ಭೂಮಿಕೆಯನ್ನು ಆಮಿರ್ ಖಾನ್ ನಿರ್ವಹಿಸಿದ ಭಾರತೀಯ ಅವತರಣಿಕೆಯನ್ನು ಅದ್ವೈತ್ ಚಂದನ್ ಮತ್ತು ಅತುಲ್ ಕುಲಕರ್ಣಿ ಅವರು 'ಲಾಲ್ ಸಿಂಗ್ ಛಡ್ಡಾ' ಮೂಲಕ ಹೊರತಂದಿದ್ದಾರೆ. ''1994ರ ಫಾರೆಸ್ಟ್ ಗಂಪ್ 13 ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡು ಕೊನೆಗೆ ಆರು ಪ್ರಶಸ್ತಿಗಳನ್ನು ಬಾಚಿಕೊಂಡಿರುವುದನ್ನೂ ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.