Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಬಂಟ್ವಾಳ ; ರಮಾನಾಥ ರೈ ನೇತೃತ್ವದಲ್ಲಿ...

ಬಂಟ್ವಾಳ ; ರಮಾನಾಥ ರೈ ನೇತೃತ್ವದಲ್ಲಿ 'ಆಟಿಡ್ ಕೆಸರ್ಡ್ ಒಂಜಿ ದಿನ'

ಸರ್ವ ಧರ್ಮಗಳ ಸಾಮರಸ್ಯದ ಜಾತ್ರೆಯಾದ 'ಆಟಿದ ಕೂಟ'

ವಾರ್ತಾಭಾರತಿವಾರ್ತಾಭಾರತಿ14 Aug 2022 10:59 PM IST
share
ಬಂಟ್ವಾಳ ; ರಮಾನಾಥ ರೈ ನೇತೃತ್ವದಲ್ಲಿ ಆಟಿಡ್ ಕೆಸರ್ಡ್ ಒಂಜಿ ದಿನ

ಬಂಟ್ವಾಳ, ಆ.14: ಆಟಿದ ಕೂಟ ಸಮಿತಿ ಬಂಟ್ವಾಳ ಇದರ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕಿನ ಪಂಜಿಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ರವಿವಾರ ಹಮ್ಮಿಕೊಂಡ 'ಆಟಿಡ್ ಕೆಸರ್ಡ್ ಒಂಜಿ ದಿನ' ಕಾರ್ಯಕ್ರಮದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಜನತೆ, ಮಹಿಳೆಯರು, ಮಕ್ಕಳು, ಪುರಿಷರು ಕೆಸರು ಗದ್ದೆಯಲ್ಲಿ ಮಿಂದೆದ್ದರು. 

ಎಳೆ ವಯಸ್ಸಿನ ಮಕ್ಕಳಿಂದ ಹಿಡಿದು ಯುವಕ, ಯುವತಿಯರು, ಪುರುಷರು, ಮಹಿಳೆಯರು ಕೆಸರು ಗದ್ದೆಯಲ್ಲಿ ನಡೆದ ವಿವಿಧ ರೀತಿಯ ಆಟೋಟದಲ್ಲಿ ಭಾಗವಹಿಸಿ ಸಖತ್​ ಎಂಜಾಯ್​ ಮಾಡಿದರು. ಆಟೋಟದ ಜೊತೆ ಮಕ್ಕಳು ನೀರು ತುಂಬಿದ ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಮೈ ಮೆರೆದರು. 

ಧರ್ಮದ ಹೆಸರಿನಲ್ಲಿ ಅಹಿತಕರ ಘಟನೆಗಳಿಂದ ಕೋಮು ಸೂಕ್ಷ್ಮ ತಾಲೂಕು ಎಂದೇ ಕುಖ್ಯಾತಿಗೆ ಒಳಗಾದ ಬಂಟ್ವಾಳದಲ್ಲಿ ಈ ಆಟಿದ ಕೂಟ ಸೌಹಾರ್ದತೆಯನ್ನು ಸಾರುವ ಕಾರ್ಯಕ್ರಮವಾಗಿ ಮಹತ್ವವನ್ನು ಪಡೆಯಿತು. 

ಎಲ್ಲಾ ಜಾತಿ, ಧರ್ಮ, ವರ್ಗದ ಜನರು ಒಂದೆಡೆ ಸೇರಿ ಒಂದೇ ಗದ್ದೆಯಲ್ಲಿ ವಿವಿಧ ಅಟೋಟದಲ್ಲಿ ಭಾಗಿಯಾಗಿದರು. ಎಲ್ಲರೂ ಒಂದೆಡೆ ಸೇರಿ ಊಟ ಉಪಹಾರ ಸೇವಿಸಿ ಆನಂದಿಸಿದ ಈ ಕಾರ್ಯಕ್ರಮ ಸರ್ವ ಧರ್ಮಗಳ ಸಾಮರಸ್ಯದ ಜಾತ್ರೆಯಾಗಿಯೇ ಮಾರ್ಪಟ್ಟಿತು. 

ಕಾರ್ಯಕ್ರಮದಲ್ಲಿ ಸಂಗೀತ ಕುರ್ಚಿ, ಶೂಟಿಂಗ್ ದ ವಿಕೆಟ್, ಕೆಸರುಗದ್ದೆ ಓಟ, ಲಿಂಬೆ ಚಮಚ ಓಟ, ಪಾಡ್ದನ ಹೇಳುವ ಸ್ಪರ್ಧೆ, ಹಿಮ್ಮುಖ ಓಟ, ನೀರಿನ ಕೊಡ ಸೊಂಟದಲ್ಲಿಟ್ಟು ಓಟ, ಮಡಲು ಹೆಣೆಯುವುದು, ಮಡಿಕೆ ಹೊಡೆಯುವುದು, ಕಾರುಕಂಬ್ಳ ಓಟ, ಅಂತರ್ ಪಂಚಾಯತ್ ತಂಡಗಳ ನಡುವೆ ಹಗ್ಗ ಜಗ್ಗಾಟ, ಬಾಲ್ ಎಸೆತ, ಉರಾಳ್ ಹಾಕುವುದು, ಅಡಿಕೆ ಹಾಳೆಯಲ್ಲಿ ಎಳೆತ, ದಂಪತಿಗೆ ಕ್ರೇಝಿ ಗೇಮ್ಸ್, ತಪ್ಪಂಗಾಯಿ ಓಟ, ತೆಂಗಿನಕಾಯಿ ಉರುಳಿಸುವುದು ಮೊದಲಾದ ಆಟಗಳು ಗಮನ ಸೆಳೆಯಿತು.

ಪ್ರಾರಂಭದಲ್ಲಿ ಪಂಜಿಕಲ್ಲು ಬಸದಿ ಹಾಗೂ ಗರಡಿಯಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು. ಕಂಬಳದ ಕೋಣಗಳು ಸಹಿತ ಮೆರವಣಿಗೆ ನಡೆಸಿ ಕೋಣೆಗಳನ್ನು ಕೆಸರುಗದ್ದೆಗೆ ಇಳಿಸಲಾಯಿತು. ಆಟಿದ ಕೂಟ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರಶಾತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಪಂಜಿಕಲ್ಲು ಗರಡಿ ಆಡಳಿತ ಪ್ರಮುಖ ಪ್ರಕಾಶ್‌ ಕುಮಾರ್ ಜೈನ್, ಸಮಿತಿಯ ಪ್ರಮುಖರಾದ ಬೇಬಿ ಕುಂದರ್, ಸುದೀಪ್‌ ಕುಮಾರ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಅಬ್ಬಾಸ್ ಅಲಿ ಮೊದಲಾದವರು ಉಪಸ್ಥಿತರಿದ್ದರು.  

ಪ್ರಧಾನ ಕಾರ್ಯದರ್ಶಿ ಸುದರ್ಶನ್ ಜೈನ್ ಸ್ವಾಗತಿಸಿದರು. ಕೋಶಾಧಿಕಾರಿ ದೇವಪ್ಪ ಕುಲಾಲ್ ವಂದಿಸಿದರು. ಮಾಣಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. 

'ತಿಂಡಿ ತಿನಿಸುಗಳು, ಕಷಾಯದ ರುಚಿ ಸವಿದು ಆನಂದಿಸಿದ ಜನತೆ' 

ಕಾರ್ಯಕ್ರಮದಲ್ಲಿ ತುಳುನಾಡಿದ ಸಾಂಪ್ರದಾಯಿಕ ತಿಂಡಿ ತಿನಿಸುಗಳು, ಕಷಾಯ ಗಮನ ಸೆಳೆಯಿತು. ಬೆಳಗ್ಗೆ ನಾಚಿಗೆ ಮುಳ್ಳು ಕಷಾಯ, ಬೇಂಗದ ಕೆತ್ತೆ ಕಷಾಯ, ಪತ್ರೊಡೆ, ಪದೆಂಜಿ ಉಪ್ಪುಕರಿ, ಪೆಲಕಾಯಿ ಗಟ್ಟಿ. ಮಧ್ಯಾಹ್ನದ ಊಟಕ್ಕೆ ಕಣಿಲೆ ಉಪ್ಪಡ್, ಚೇವು ಸೋನೆ ಸೊಪ್ಪು ಚಟ್ನಿ, ಉಪ್ಪಡ್ ಪಚ್ಚಿಲ್ ಪಲ್ಯ, ಕುಡುತ ಸಾರ್, ಕರಿಚೇವು ಅಂಬಡೆ ಗಸಿ, ಪೂಂಬೆ ಚಟ್ನಿ, ತಜಂಕ್ ಪೆಲತರಿ ಸುಕ್ಕ, ಕಂಚಲ್ ಪೀರೆ ಪೋಡಿ, ಕಜೆ ಅರಿ ನುಪ್ಪು, ಪೆಲಕಾಯಿ ಪಾಯಸ. ಸಂಜೆಗೆ ಪೆಲಕಾಯಿ ಗಾರಿ, ಪತ್ರೊಡೆ ಉಪ್ಪುಕರಿ, ರಾಗಿ ಮಣ್ಣಿ, ಕಡುಬು ಮಂಜಲ್ ಇರೆತ ಗಟ್ಟಿ, ತಜಂಕ್ ಅಂಬಡೆ, ಈಂದ್ ಹುಡಿ ಕಷಾಯದ ರುಚಿ ಸವಿದು ಆನಂದಿಸಿದರು.

"ಎಲ್ಲಾ ಸಮುದಾಯದ ಜನರು ಸೇರಿ ನಡೆಸುತ್ತಿದ್ದ ಕೃಷಿ ಪದ್ಧತಿ ಇಂದು ಬದಲಾವಣೆ ಕಂಡಿದೆ. ಹಿಂದಿನ ಕಾಲದ ಕಷ್ಟದ ದಿನಗಳು ಕೂಡ ಇಂದು ಇಲ್ಲವಾಗಿದೆ. ಆದರೆ ನಮ್ಮ ತುಳುನಾಡಿನ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯ ಅಗತ್ಯವಾಗಿ ನಡೆಯಬೇಕು". 

- ಬಿ.ರಮಾನಾಥ ರೈ, ಮಾಜಿ ಸಚಿವ 

ಗಮನ ಸೆಳೆದ 'ಕೆನೆ ಕಲ್ಪನೆ' ಸ್ವರ್ಧೆ 

ಕೋಲು ಒಂದಕ್ಕೆ ಅಡಿಕೆ ಹಾಳೆಯನ್ನು ಹಗ್ಗದಿಂದ ಕಟ್ಟಿ, ಹಾಳೆಯಲ್ಲಿ ಒಬ್ಬ ಕುಳಿತುಕೊಂಡು ಇಬ್ಬರು ಕೋಲನ್ನು ನೊಗದ ಮಾದರಿಯಲ್ಲಿ ಹೆಗಲಲ್ಲಿ ಇಟ್ಟು ಎಳೆಯುತ್ತಾ ಓಡುವ ಕಂಬಳದ ಕೆನೆ ಹಲಗೆ ಮಾದರಿಯ ವಿನೂತನ ಆಟ ಜನಮನ ಸೆಳೆಯಿತು. ಗದ್ದೆಯಲ್ಲಿ ನಿರ್ಮಿಸಿದ್ದ ಕೋಟಿ ಚೆನ್ನಯ ಕರೆಯಲ್ಲಿ ಈ ಆಟ ನಡೆಯುವ ಮೂಲಕ ಕಂಬಳದ ಅನುಭವ ನೀಡಿತು. ಈ ವಿನೂತನ ಆಟವನ್ನು ಆಟಿದ ಕೂಟ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ಪರಿಚಯಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X