ಉಡುಪಿ ಜಾಮೀಯ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

ಉಡುಪಿ, ಆ.15: ಉಡುಪಿ ಜಾಮಿಯಾ ಮಸೀದಿ ವಠಾರದಲ್ಲಿ 75ನೆ ಸ್ವಾತಂತ್ರ್ಯೋತ್ಸವ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಜಾಮಿಯಾ ಮಸೀದಿಯ ಖತೀಬ್ ಮೌಲಾನ ರಶೀದ್ ಅಹಮದ್ ನದ್ವಿ ಧ್ವಜಾರೋಹಣ ನೆರವೇರಿಸಿ ಸ್ವಾಂತ್ರ್ಯೋತ್ಸವದ ಸಂದೇಶ ನೀಡಿದರು. ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಮುಹಮ್ಮದ್ ಅರ್ಷದ್ ವಹಿಸಿದ್ದರು.
ಮಸೀದಿಯ ಪ್ರಧಾನ ಕಾರ್ಯದರ್ಶಿ ವಿ.ಎಸ್.ಉಮರ್ ಸ್ವಾಗತಿಸಿದರು. ಸಮಿತಿ ಸದಸ್ಯರಾದ ಖಲೀಲ್ ಅಹಮದ್, ಮುನೀರ್ ಮಹಮ್ಮದ್, ಇಫ್ತಿಕಾರ್, ತಬ್ರೆಝ್, ಜಮಾತ್ ಸದಸ್ಯರು, ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಖಜಾಂಚಿ ರಿಯಾಝ್ ಅಹಮದ್ ವಂದಿಸಿದರು.
Next Story