ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್: ಕತ್ತಿವರಸೆಯಲ್ಲಿ ಪದಕ ಜಯಿಸಿ ಚರಿತ್ರೆ ಬರೆದ ಪ್ಯಾರಾ ಅತ್ಲೀಟ್ ರಾಘವೇಂದ್ರ

ಹೊಸದಿಲ್ಲಿ, ಆ.15: ಭಾರತದ ಪ್ಯಾರಾ ಅತ್ಲೀಟ್ ರಾಘವೇಂದ್ರ ಇತ್ತೀಚೆಗೆ ಕಾಮನ್‌ವೆಲ್ತ್ ಕತ್ತಿವರಸೆ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಪ್ಯಾರಾ-ಫೆನ್ಸರ್ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು.
ಗುರುವಾರ ನಡೆದಿದ್ದ ಪುರುಷರ ವೈಯಕ್ತಿಕ ವೀಲ್‌ಚೇರ್‌ನ ಬಿ ವಿಭಾಗದಲ್ಲಿ ರಾಘವೇಂದ್ರ ಬೆಳ್ಳಿ ಪದಕ ಜಯಿಸಿದ್ದರು. ಒಟ್ಟು ನಾಲ್ವರು ಸ್ಪರ್ಧಾಕಣದಲ್ಲಿದ್ದರು. ಇಂಗ್ಲೆಂಡ್‌ನ ಡಿಮಿಟ್ರಿ ಕೌಟಿ ಚಿನ್ನ ಜಯಿಸಿದರು.
ಭಾರತದ ಇನ್ನೋರ್ವ ಸ್ಪರ್ಧಿ ದೇವೇಂದ್ರ ಕುಮಾರ್ ಅವರು ಇಂಗ್ಲೆಂಡ್‌ನ ರಶೀದ್ ಖಾನ್ ಜೊತೆಗೂಡಿ ಕಂಚಿನ ಪದಕ ಜಯಿಸಿದರು.
ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿ(ಪಿಸಿಐ) ಲಂಡನ್‌ನಲ್ಲಿ ಇತಿಹಾಸ ನಿರ್ಮಿಸಿರುವ ಇಬ್ಬರು ಸ್ಪರ್ಧಿಗಳನ್ನು ಟ್ವಿಟರ್‌ನಲ್ಲಿ ಅಭಿನಂದಿಸಿದೆ.
Next Story