ಇಸ್ರೇಲ್ ಸೇನೆಯ ದಾಳಿಗೆ ಪೆಲೆಸ್ತೀನ್ ಯುವಕ ಮೃತ್ಯು
![ಇಸ್ರೇಲ್ ಸೇನೆಯ ದಾಳಿಗೆ ಪೆಲೆಸ್ತೀನ್ ಯುವಕ ಮೃತ್ಯು ಇಸ್ರೇಲ್ ಸೇನೆಯ ದಾಳಿಗೆ ಪೆಲೆಸ್ತೀನ್ ಯುವಕ ಮೃತ್ಯು](https://www.varthabharati.in/sites/default/files/images/articles/2022/08/15/346065-1660587710.jpeg)
PHOTO CREDIT: AP
ಜೆರುಸಲೇಂ, ಆ.15: ಆಕ್ರಮಿತ ಪೂರ್ವಜೆರುಸಲೇಂನ ಕುಫ್ರ್ ಅಖಬ್ ಪ್ರದೇಶದಲ್ಲಿ ಇಸ್ರೇಲ್ ಸೇನೆ ನಡೆಸಿದ ಕಾರ್ಯಾಚರಣೆ ಸಂದರ್ಭ ಪೆಲೆಸ್ತೀನ್ ಯುವಕ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸೋಮವಾರ ಬೆಳಿಗ್ಗೆ ತಮ್ಮ ಮನೆಗೆ ನುಗ್ಗಿದ ಇಸ್ರೇಲ್ ಯೋಧರು ತನ್ನ ಪುತ್ರ ಮುಹಮ್ಮದ್ ಇಬ್ರಾಹಿಂನ ತಲೆಗೆ ಅತ್ಯಂತ ಸಮೀಪದಲ್ಲಿ ಗುಂಡು ಹಾರಿಸಿದೆ. ಇನ್ನೊಬ್ಬ ಪುತ್ರ ಮತ್ತು ತಾನು ಮನೆಯೊಳಗೆ ಅಡಗಿ ಕುಳಿತು ಬಚಾವಾಗಿದ್ದೇವೆ ಎಂದು ಮೃತ ಯುವಕನ ತಂದೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯುವಕನ ಹತ್ಯೆ ಅತ್ಯಂತ ಖಂಡನೀಯ ಕೃತ್ಯ ಎಂದು ಪೆಲೆಸ್ತೀನ್ ಅಥಾರಿಟಿಯ ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.
ಶೋಧ ಕಾರ್ಯಾಚರಣೆಗೆ ತೆರಳಿದ್ದ ಯೋಧರ ಮೇಲೆ ಮುಹಮ್ಮದ್ ಚೂರಿಯಿಂದ ದಾಳಿಗೆ ಮುಂದಾದಾಗ ಆತ್ಮರಕ್ಷಣೆಗೆ ಯೋಧರು ಗುಂಡು ಹಾರಿಸಿದ್ದಾರೆ ಎಂದು ಇಸ್ರೇಲ್ ಹೇಳಿದೆ.
Next Story