ಗಿರಿಜಾ ಗ್ರೂಪ್‌ನಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

ಉಡುಪಿ, ಆ.16: ಉಡುಪಿಯ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ ವತಿಯಿಂದ ಸ್ವಾತಂತ್ರೋತ್ಸವದ ಅಂಗವಾಗಿ ಉಚಿತ ವೀಲ್ ಚೇಯರ್ ವಿತರಣೆ ಕಾರ್ಯಕ್ರಮ ನಡೆಯಿತು.
ಉಡುಪಿ ಜಿಲ್ಲಾ ಸಹಾಯಕ ಔಷಧ ನಿಯತ್ರಣಾಧಿಕಾರಿ ಶಂಕರ್ ನಾಯ್ಕ್ ಧ್ವಜಾರೋಹಣ ನೆರವೇರಿಸಿದರು. ಉಡುಪಿ ಮೆಡಿಕಲ್ ಎಂಪಿರಿಯಂ ಮಾಲಕ ರಮೇಶ್ ನಾಯಕ್, ನಗರಸಭಾ ಸದಸ್ಯೆ ಮಾನಸ ಪೈ, ಸಾಮಾಜಿಕ ಕಾರ್ಯ ಕರ್ತ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆರ್ಥಿಕವಾಗಿ ಅಶಕ್ತರಾದ ಕೆ.ಪಿ.ಕುಂದರ್ ಅವರಿಗೆ ಗಿರಿಜಾ ಹೆಲ್ತ್‌ಕೇರ್ ಆ್ಯಂಡ್ ಸರ್ಜಿಕಲ್ ವತಿಯಿಂದ ಉಚಿತ ವೀಲ್ ಚೇಯರ್ ನೀಡಲಾಯಿತು. ಗಿರಿಜಾ ಗ್ರೂಪಿನ ಸಿಎಂಡಿ ರವೀಂದ್ರ ಕೆ.ಶೆಟ್ಟಿ ಉಪಸ್ಥಿತರಿದ್ದರು.
Next Story