ಮಲ್ಲೂರು ಟುಡೇ ಮೀಡಿಯಾ ಸೆಂಟರ್ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಗಳೂರು : ಮಲ್ಲೂರು ಟುಡೇ ಮೀಡಿಯಾ ಸೆಂಟರ್ ವತಿಯಿಂದ ಎಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮರ್ಹೂಂ ಎಂ.ಡಿ.ಜಬ್ಬಾರ್ ಮಲ್ಲೂರು, ಮರ್ಹೂಂ ಹಾಜಿ ಎ.ಎನ್. ಇಬ್ರಾಹಿಂ ಗರಡಿ ಅಡ್ಡೂರು ಸ್ಮರಣಾರ್ಥ ವಿದ್ಯಾರ್ಥಿ ವೇತನ, ವಿತರಣಾ, ಗೌರವ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಬದ್ರಿಯಾ ಜುಮಾ ಮಸ್ಜಿದ್ ಮಲ್ಲೂರು ದೆಮ್ಮಲೆ ಅಧ್ಯಕ್ಷ ಮುಹಮ್ಮದ್ ಶರೀಫ್ ಕಾರ್ಯಕ್ರಮ ಉದ್ಘಾಟಿಸಿದರು. ಸೈಯದ್ ಹಸನ್ ಹೈದ್ರೋಸ್ ಜುಮಾ ಮಸ್ಜಿದ್ ಉದ್ದಬೆಟ್ಟು ಗೌರವಾಧ್ಯಕ್ಷ ಎಂ. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಫರಾ ಬದ್ರಿಯಾನಗರ, ನುಶ್ರತ್ ಕಲಾಯಿ, ಶಹನಾಝ್ ಪಲ್ಲಿಬೆಟ್ಟು, ಫಾತಿಮಾ ಮಾಝಿದಾ ಬೇಗಂ ಉದ್ದಬೆಟ್ಟು.. ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸಫಾ ಮಲ್ಲೂರು, ಹಾಫೀಳ್ ಹನ್ನಾನ್ ನಡುಮನೆ ಉದ್ದಬೆಟ್ಟು ಹಾಗೂ ಮಿತ್ತಬೈಲ್ ದಾರೂಲ್ ಉಲೂಂ ಕಾಲೇಜಿನಲ್ಲಿ ಶರೀಅತ್ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾ ಗಿರುವ, ಪ್ರಸ್ತುತ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಸಿನಾ ಅಲ್ ಸವಿಯ್ಯಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಜ್ಲಿಸ್ ಗಾಣೆಮಾರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಬಜ್ಪೆದಿಕ್ಸೂಚಿ ಭಾಷಣ ಗೈದರು. ಸಮಾಜ ಸೇವಕಾರದ ಕೆ.ಎ ಸಿದ್ದೀಕ್ ಅಡ್ಡೂರು, ಅಶ್ರಫ್ ವಳಚ್ಚಿಲ್, ವೈದ್ಯೆ ನಝ್‌ನಿನ್ ಫಾತಿಮಾ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು, ಬದ್ರಿಯಾನಗರ ಮಸ್ಜಿದ್ ಅಧ್ಯಕ್ಷ ಅಶ್ರಫ್ ಬದ್ರಿಯಾನಗರ, ಪಲ್ಲಿಬೆಟ್ಟು ಮಸ್ಜಿದ್ ಅಧ್ಯಕ್ಷ ಎಂಐ ಶರೀಫ್ ಮಲ್ಲೂರು, ಉದ್ಯಮಿಗಳಾದ ಅಬೂಬಕ್ಕರ್ ಬೊಲ್ಲಂಕಿಣಿ, ನವಾಝ್ ಕೆಬಿಆರ್ ಉಳಾಯಿಬೆಟ್ಟು, ಮನ್ಸೂರ್ ಬದ್ರಿಯಾನಗರ, ಮಲ್ಲೂರು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರಹೀಂ ಮಲ್ಲೂರು ಉಪಸ್ಥಿತರಿದ್ದರು.
ಮಲ್ಲೂರು ಟುಡೇ ಮೀಡಿಯಾ ಸೆಂಟರ್ ಅಧ್ಯಕ್ಷ ಜಬ್ಬಾರ್ ಮಲ್ಲೂರು ಸ್ವಾಗತಿಸಿದರು. ಅಲ್ತಾಫ್ ದೆಮ್ಮಲೆ ಕಾರ್ಯಕ್ರಮ ನಿರೂಪಿಸಿದರು.







