Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸ್ವತಂತ್ರ್ಯದ ಸಂಭ್ರಮದ ನಡುವೆ ಬಿಸಿಯೂಟ...

ಸ್ವತಂತ್ರ್ಯದ ಸಂಭ್ರಮದ ನಡುವೆ ಬಿಸಿಯೂಟ ಕಾರ್ಮಿಕರ ಶೋಷಿಸುತ್ತಿರುವ ಸರಕಾರ: ಬಿ.ಎಂ.ಭಟ್ ಆರೋಪ

ವಾರ್ತಾಭಾರತಿವಾರ್ತಾಭಾರತಿ16 Aug 2022 11:17 PM IST
share
ಸ್ವತಂತ್ರ್ಯದ ಸಂಭ್ರಮದ ನಡುವೆ ಬಿಸಿಯೂಟ ಕಾರ್ಮಿಕರ ಶೋಷಿಸುತ್ತಿರುವ ಸರಕಾರ: ಬಿ.ಎಂ.ಭಟ್ ಆರೋಪ

ಬೆಳ್ತಂಗಡಿ; ಶಾಲಾ ಮಕ್ಕಳಿಗೆ ಅಡುಗೆ ಮಾಡಿ ಬಿಸಿಯೂಟ ಬಡಿಸುವ ಕೆಲಸ ಮಾಡುವ ಮಾತೆಯರನ್ನ ಸಂಬಳ ನೀಡದೆ ದುಡಿಸುವ ಸರಕಾರದ ಸ್ವತಂತ್ರ್ಯದ ಅಮೃತ ಮಹೋತ್ಸವದ ಕೊಡುಗೆಯೇ? ಎಂದು ಕಾರ್ಮಿಕ ನಾಯಕ ಬಿ.ಎಂ.ಭಟ್ ಪ್ರಶ್ನಿಸಿದರು.

ಬೆಳ್ತಂಗಡಿ ತಾಲೂಕು ಅಕ್ಷರ ದಾಸೋಹ ನೌಕರರ ಸಂಘಟನೆಯ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನ ಸೌದ ಎದುರು ನಡೆದ ಬಿಸಿಯೂಟ ನೌಕರರ ಹೋರಾಟವನ್ನುದ್ದೇಶಿಸಿ ಅವರು ಮಾತಾಡುತ್ತಿದ್ದರು.

ಮೊದಲೇ ಬದುಕಲು ತಕ್ಕ ಸಂಬಳ ನೀಡದ ಸರಕಾರ ನೀಡುವ 3,500 ರೂ ಮಾಸಿಕ ಸಂಬಳವನ್ನೂ ಕಳೆದ 3 ತಿಂಗಳಿಂದ ನೀಡದೆ ಬಿಸಿಯೂಟ ಕಾರ್ಮಿಕರ ದುಡಿಸುವ ಸರಕಾರ ನಡೆ ಖಂಡನೀಯ ಎಂದವರು ಹೇಳಿದರು. ಸರಕಾರದ ಬಳಿ ಕೇಳಿದರೆ ಹಣ ಇಲ್ಲದಾಗಿದೆ ಎನ್ನುವ ಸರಕಾರಕ್ಕೆ ಕಮೀಶನ್ ಧಂಧೆಗೆ, ದುಂದು ವೆಚ್ಚಗಳಿಗೆ ಶಾಸಕರ ಸಂಬಳಗಳಿಗೆ ಹಣ ಇರುವಾಗ ಬಡ ತಾಯಂದಿರಿಗೆ ಹಣ ಇಲ್ಲ ಎನ್ನುತ್ತಾ ಜೀತದಾಳುಗಳಂತೆ ದುಡಿಸುವುದನ್ನು ಖಂಡಿಸುತ್ತೇವೆ. ಬಿಸಿಯೂಟ ನೌಕರರಿಗೆ ತಕ್ಷಣ ದುಡಿದ ವೇತನ ನೀಡಿ, ಮಾಸಿಕ ವೇತನ ಕನಿಷ್ಟ 10,000 ನೀಡಬೇಕು ಹಾಗೂ ತಿಂಗಳ ಮೊದಲ ದಿನ ನೀಡಬೇಕು ಎಂದವರು ಹೇಳಿದರು. 60 ವರ್ಷ ಆಗಿದೆ ಎಂದು ಬಡ ತಾಯಂದಿರ ಕಡ್ಡಾಯ ನಿವೃತ್ತಿಗೊಳಿಸಿದ ಸರಕಾರ ಅವರಿಗೆ ಕನಿಷ್ಟ ಪರಿಹಾರವನ್ನಾಗಲಿ ಪಿಂಚಿಣಿಯನ್ನಾಗಲಿ ನೀಡದೆ ಬೀದಿಗೆ ತಳ್ಳಿದೆ. ಮಾತೆ ಮಾತೆ ಎನ್ನುವ ಬಿಜೆಪಿ ತನ್ನ ಮಾತು ಉಳಿಸಲಾದರೂ ಅವರಿಗೆ ಪರಿಹಾರ ಪಿಂಚಿಣಿ ಒದಗಿಸಬೇಕು ಎಂದರು.

ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಿ ಬಳಿಕ ಮೆರವಣಿಗೆಯಿಂದ ತಾಲೂಕು ಪಂಚಾಯತಿಗೆ ತೆರಳಿ ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ಧಶಕರ ಮೂಲಕವೂ ಸರಕಾರಕ್ಕೆ ಮನವಿ ನೀಡಿದರು.

ಮೊದಲಿಗೆ ಕಾರ್ಮಿಕ ನಾಯಕಿ ಜಯಶ್ರೀ ಸ್ವಾಗತಿಸಿ ಕೊನೆಗೆ ಕಾರ್ಯದರ್ಶಿ ಜಾನಕಿ ವಂದಿಸಿದರು. ಹೋರಾಟದಲ್ಲಿ ಸಂಘದ ಅದ್ಯಕ್ಷರಾದ ಬಾಲಕಿ, ಉಪಾದ್ಯಕ್ಷರಾದ ಶ್ಯಾಮಲ, ಸಹಕಾರ್ಯದರ್ಶಿ ಸುಂದರಿ, ಖಜಾಂಜಿ ಹೇಮ, ಕ್ಲೆಸ್ಟರ್ ಮುಖಂಡರಾದ ವಾರಿಜ, ಜಾನಕಿ ಬಂಗಾಡಿ, ಗೀತ ಕಾಯರ್ತಡ್ಕ, ಪದ್ಮಾವತಿ, ವೇದಾವತಿ, ಕಾರ್ಮಿಕ ಮುಖಂಡರುಗಳಾದ ಜಯರಾಮ ಮಯ್ಯ, ನೆಬಿಸಾ, ಭವ್ಯ, ರಾಮಚಂದ್ರ, ಲಾರೆನ್ಸ್, ಮೊದಲಾದವರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X