ಮಹಿಳೆ ಪ್ರಚೋದನಾತ್ಮಕ ಬಟ್ಟೆ ಹಾಕಿದ್ದರೆ ಲೈಂಗಿಕ ಕಿರುಕುಳ ಪ್ರಕರಣ ಮೇಲ್ನೋಟಕ್ಕೆ ಅನ್ವಯಿಸದು: ಕೇರಳ ಜಿಲ್ಲಾ ನ್ಯಾಯಾಲಯ

Photo:PTI
ಹೊಸದಿಲ್ಲಿ: ಮಹಿಳೆ ಪ್ರಚೋದನಾತ್ಮಕ ಬಟ್ಟೆ ಹಾಕಿದ್ದರೆ ಲೈಂಗಿಕ ಕಿರುಕುಳ ಪ್ರಕರಣ ಮೇಲ್ನೋಟಕ್ಕೆ ಅನ್ವಯವಾಗುವುದಿಲ್ಲಎಂದು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬರಹಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸಿವಿಕ್ ಚಂದ್ರನ್ಗೆ ನಿರೀಕ್ಷಣಾ ಜಾಮೀನು ನೀಡುವ ವೇಳೆ ಕೋಝಿಕ್ಕೋಡ್ನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಜಾಮೀನು ಅರ್ಜಿಯೊಂದಿಗೆ ದೂರುದಾರರ ಛಾಯಾಚಿತ್ರಗಳನ್ನು ಒದಗಿಸಿದ್ದ ಚಂದ್ರನ್ಗೆ ಆಗಸ್ಟ್ 12 ರಂದು ನಿರೀಕ್ಷಣಾ ಜಾಮೀನು ನೀಡಲಾಯಿತು. ಇದಕ್ಕೂ ಮೊದಲು ಆಗಸ್ಟ್ 2 ರಂದು ಅವರು ತಮ್ಮ ವಿರುದ್ಧ ದಾಖಲಿಸಲಾದ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಮಹಿಳೆಯ ಛಾಯಾಚಿತ್ರಗಳನ್ನು ಉಲ್ಲೇಖಿಸಿದ ನ್ಯಾಯಾಲಯವು, "ವಾಸ್ತವವಾಗಿ ದೂರುದಾರರು ಕೆಲವು ಲೈಂಗಿಕ ಪ್ರಚೋದನಕಾರಿ ಉಡುಪುಗಳನ್ನು ಸ್ವತಃ ಬಹಿರಂಗಪಡಿಸುತ್ತಿದ್ದಾರೆ. ಆದ್ದರಿಂದ, ಸೆಕ್ಷನ್ 354A ಆರೋಪಿಗಳ ವಿರುದ್ಧ ಪ್ರಾಥಮಿಕವಾಗಿ ನಿಲ್ಲುವುದಿಲ್ಲ'' ಎಂದಿದೆ.
Next Story





