ಜಿಎಸ್ಟಿ ಹೇರಿಕೆಯಿಂದ ಜನರ ಬಳಿ ಹಣವಿಲ್ಲ, ಇಷ್ಟವಾಗುವ ಚಿತ್ರವನ್ನು ಮಾತ್ರ ಜನ ನೋಡಲು ಬಯಸುತ್ತಾರೆ: ಅನುರಾಗ್ ಕಶ್ಯಪ್
"ನಿಜ ಸಮಸ್ಯೆಗಳಿಂದ ಗಮನ ತಿರುಗಿಸಲು ʼಬಹಿಷ್ಕಾರʼ ಟ್ರೆಂಡ್ ಬಳಸಲಾಗುತ್ತದೆ"

ಮುಂಬೈ: ಜಿಎಸ್ಟಿ(GST) ಹೇರಿಕೆಯಿಂದಾಗಿ ಜನರ ಬಳಿ ಸಾಕಷ್ಟು ಹಣವಿಲ್ಲ, ಆದುದರಿಂದ ಒಂದು ಚಿತ್ರ ಚೆನ್ನಾಗಿದೆ ಎಂದು ಅದಕ್ಕೆ ಖರ್ಚು ಮಾಡುವ ಮೊದಲು ಜನರು ತಿಳಿಯಬಯಸುತ್ತಾರೆ ಎಂದು ಖ್ಯಾತ ಚಿತ್ರ ತಯಾರಕ ಅನುರಾಗ್ ಕಶ್ಯಪ್ (Anurag Kashyap) ಹೇಳಿದ್ದಾರೆ.
ಇತ್ತೀಚಿಗಿನ ದಿನಗಳಲ್ಲಿ ಬಾಲಿವುಡ್ ಚಿತ್ರಗಳು ಬಾಕ್ಸಾಫೀಸಿನಲ್ಲಿ ಚೆನ್ನಾಗಿ ಏಕೆ ನಿರ್ವಹಿಸುತ್ತಿಲ್ಲ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಚಲನಚಿತ್ರಗಳಲ್ಲೇನು ಕೊರತೆಯಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು "ಏನೂ ಕೊರತೆಯಿಲ್ಲ. ದಕ್ಷಿಣದ ಚಲನಚಿತ್ರಗಳು(South Movies) ಯಶಸ್ವಿಯಾಗಿವೆ ಎಂದು ನಿಮಗೆ ಹೇಗೆ ಗೊತ್ತು. ಕನ್ನಡ ಮತ್ತು ತಮಿಳಿನಲ್ಲಿ ತಲಾ ಒಂದು ಚಲನಚಿತ್ರ ಹಾಗೂ ಹಿಂದಿ ಮತ್ತು ತೆಲುಗುವಿನಲ್ಲಿ ತಲಾ ಎರಡು ಚಲನಚಿತ್ರಗಳು ಯಶಸ್ವಿಯಾಗಿವೆ".
"ಕಳೆದ ಕೆಲ ವಾರಗಳಲ್ಲಿ ಬಿಡುಗಡೆಗೊಂಡ ತೆಲುಗು, ತಮಿಳು ಕನ್ನಡ ಚಲನಚಿತ್ರಗಳೂ ಯಶಸ್ಸು ಕಂಡಿಲ್ಲ. ಏಕೆಂದರೆ ಅಲ್ಲಿಯೂ ಚಿತ್ರಗಳೂ ಯಶಸ್ವಿಯಾಗುತ್ತಿಲ್ಲ. ಮುಖ್ಯ ಸಮಸ್ಯೆಯೇನೆಂದರೆ ಜನರ ಬಳಿ ಹಣವಿಲ್ಲ, ನೀವು ಪನೀರ್ ಮೇಲೆ, ಆಹಾರದ ಮೇಲೆ ಜಿಎಸ್‍ಟಿ ಪಾವತಿಸುತ್ತೀರಿ. ಬಾಲಿವುಡ್ ಬಹಿಷ್ಕರಿಸಿ ಅದು ಇದು ಎಂದು ನಿಜವಾದ ಸಮಸ್ಯೆಯಿಂದ ಗಮನ ಬೇರೆಡೆ ಸೆಳೆಯಲಾಗುತ್ತದೆ,. ಎಲ್ಲರಿಗೂ ಇಷ್ಟವಾಗುವಂತಹ ಚಿತ್ರಗಳ ಮೇಲೆ ಮಾತ್ರ ಜನರು ಖರ್ಚು ಮಾಡಲು ಬಯಸುತ್ತರೆ. ಬಹಳ ಸಮಯದಿಂದ ನಿರೀಕ್ಷಿಸಲಾಗುತ್ತಿರುವ ಚಲನಚಿತ್ರಗಳನ್ನು ಜನರು ವೀಕ್ಷಿಸುತ್ತಾರೆ. ಉದಾಹರಣೆಗೆ RRR ಮತ್ತು ಕೆಜಿಎಫ್" ಎಂದು ಕಶ್ಯಪ್ ಹೇಳಿದರು.
Anurag Kashyap spitting facts yet again. pic.twitter.com/hO5Qi3UHFY
— Toby (@samarrkf) August 17, 2022