ಆ. 19 ರಿಂದ 21: ಕೆಎಂಸಿ ಹೊರರೋಗಿ ವಿಭಾಗಕ್ಕೆ ರಜೆ
![ಆ. 19 ರಿಂದ 21: ಕೆಎಂಸಿ ಹೊರರೋಗಿ ವಿಭಾಗಕ್ಕೆ ರಜೆ ಆ. 19 ರಿಂದ 21: ಕೆಎಂಸಿ ಹೊರರೋಗಿ ವಿಭಾಗಕ್ಕೆ ರಜೆ](https://www.varthabharati.in/sites/default/files/images/articles/2022/08/17/346295-1660747582.jpeg)
ಮಣಿಪಾಲ : ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಇತರ ಕಾರಣಗಳಿಗೆ ಆ.19ರಿಂದ 21ರವರೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆ, ಉಡುಪಿಯ ಡಾ.ಟಿ. ಎಂ.ಎ.ಪೈ ಆಸ್ಪತ್ರೆ ಹಾಗೂ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಿಗೆ ರಜೆ ಇರುತ್ತದೆ.
ಆದರೂ ಅಪಘಾತ ಹಾಗೂ ತುರ್ತು ಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story