ಮಾಣೆಕ್ ಶಾ ಪರೇಡ್ ಮೈದಾನದ ದ್ವಾರಗಳಲ್ಲಿದ್ದ ರಾಣಿ ಚೆನ್ನಮ್ಮ, ಟಿಪ್ಪು ಹೆಸರು ಅಳಿಸಿದ್ದೇಕೆ?: ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: 'ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಎರಡು ದ್ವಾರಗಳಿಗೆ ಇದ್ದ ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್ ಹೆಸರುಗಳನ್ನು ಅಳಿಸಲಾಗಿದೆ. ಧ್ವಜಾರೋಹಣಕ್ಕೂ ಮೊದಲಿದ್ದ ಹೆಸರುಗಳನ್ನು ಅಳಿಸಿ ಹಾಕಿದ್ದೇಕೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಕಾಂಗ್ರೆಸ್ (Congress) ಪ್ರಶ್ನೆ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದೆ.
''ರಾಜ್ಯದ ಮಹನೀಯರ ಏಕಿಷ್ಟ ಅಸಹನೆ? ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವನಿಗಿರುವ ಪ್ರಾಮುಖ್ಯತೆ ರಾಜ್ಯದ ಹೋರಾಟಗಾರರಿಗೆ ಏಕಿಲ್ಲ?'' ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ... ರಿವಾಲ್ವಾರ್ ಇಲ್ಲದೆ ಬರೀ ಗುಂಡು ಹೊಂದುವುದು ಅಪರಾಧ ಕೃತ್ಯವಲ್ಲ: ಹೈಕೋರ್ಟ್
ಮಣೆಕ್ ಶಾ ಮೈದಾನದಲ್ಲಿ ಎರಡು ದ್ವಾರಗಳಿಗೆ ಇದ್ದ ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್ ಹೆಸರುಗಳನ್ನು ಅಳಿಸಲಾಗಿದೆ.
— Karnataka Congress (@INCKarnataka) August 17, 2022
ಧ್ವಜಾರೋಹಣಕ್ಕೂ ಮೊದಲಿದ್ದ ಹೆಸರುಗಳನ್ನು ಅಳಿಸಿ ಹಾಕಿದ್ದೇಕೆ @BSBommai ಅವ್ರೇ?
ರಾಜ್ಯದ ಮಹನೀಯರ ಏಕಿಷ್ಟು ಅಸಹನೆ?
ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವನಿಗಿರುವ ಪ್ರಾಮುಖ್ಯತೆ ರಾಜ್ಯದ ಹೋರಾಟಗಾರರಿಗೆ ಏಕಿಲ್ಲ? pic.twitter.com/Xta8vPmANa