Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮುಲ್ಕಿ: ಕೊರಗರ ಭೂಮಿ ಹಬ್ಬ ಕಾರ್ಯಕ್ರಮ

ಮುಲ್ಕಿ: ಕೊರಗರ ಭೂಮಿ ಹಬ್ಬ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ18 Aug 2022 11:05 PM IST
share
ಮುಲ್ಕಿ: ಕೊರಗರ ಭೂಮಿ ಹಬ್ಬ ಕಾರ್ಯಕ್ರಮ

ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘದ ವತಿಯಿಂದ ಬಳ್ಕುಂಜೆ ಸಾಲ್ಯಾನ್ ಮನೆತನದ ಗುರಿಕಾರರು ಮತ್ತು ಕುಟುಂಬಸ್ಥರು, ಉಡುಪಿ ಜಿಲ್ಲಾ ಕೊರಗ ಸಂಘ ಮತ್ತು ಕೊರಲ್ ಕಲಾ ತಂಡ ಕುಡ್ಲ ಇವುಗಳ ಸಹಕಾರದೊಂದಿಗೆ 'ನಮ್ಮ ಭೂಮಿ ನಮ್ಮ ಹಕ್ಕು' ದ್ಯೇಯ ವಾಕ್ಯದೊಂದಿಗೆ ಕೊರಗರ ಭೂಮಿ ಹಬ್ಬ ಕಾರ್ಯಕ್ರಮವು ಬಳ್ಕುಂಜೆ ಕೊರಗರ ಬಲೆಪುವಿನಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಸಂಘಟನಾ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಎಂ.‌ಸುಂದರ ಬೆಳುವಾಯಿ, ಸರಕಾರ ಕೊರಗರ‌ ಬುಡಕ್ಕೇ ಪೆಟ್ಟು ನೀಡಲು ಮುಂದಾಗಿದ್ದು, ಸರಕಾರ ಕೊರಗರಿಗೆ ನೀಡಲಾಗುತ್ತಿದ್ದ ಆರೋಗ್ಯ ನಿಧಿಯನ್ನು ನಿಲ್ಲಿಸಿ ಕೊರಗರ ಅಭಿವೃದ್ಧಿಗೆ ಮುಂದಾಗಿದೆ‌. ಆರೋಗ್ಯವೇ ಇಲ್ಲದ ಮೇಲೆ ಅಭಿವೃದ್ಧಿ ಸಾಧ್ಯವೇ ಎಂದು ಅವರು ಸರಕಾರದ ಕ್ರಮವನ್ನು ಖಂಡಿಸಿದರು.

ಅನಾರೋಗ್ಯದ ನಿಮಿತ್ತ ಸಮುದಾಯದ ನಿವಾಸಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ‌. ಕಳೆದ ಏಪ್ರಿಲ್ ನಿಂದ ಇಂದಿನ ವರೆಗೆ 12 ಜೀವಗಳನ್ನು ಕಳೆದುಕೊಂಡಿದ್ದೇವೆ. ಎರಡು ಜೀವಗಳಿಗೆ ಮಾತ್ರ ಜೀವ ನೀಡಿದ್ದೇವೆ. 11ನೇ ಜನಗಣತಿಯ ಪ್ರಕಾರ ರಾಜ್ಯದಲ್ಲಿದ್ದ 21 ಸಾವಿರ ಇದ್ದ ಸಮುದಾಯ ಬಾಂಧವರ ಸಂಖ್ಯೆ 19 ಸಾವಿರಕ್ಕೆ ಇಳಿದಿದ್ದರೆ, ಜಿಲ್ಲೆಯಲ್ಲಿ 4,858 ಮಂದಿಯ ಪೈಕಿ 3700 ಮಂದಿಯಷ್ಟೇ ಇದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಮುಲ್ಕಿ ತಾಲೂಕು ತಹಶೀಲ್ದಾರ್ ಗುರುಪ್ರಸಾದ್  ಮಾತನಾಡಿ, ಕೊರಗರು ಮೂಲತಃ ಕೃಷಿಕರು. ಈ ಸಮುದಾಯದ ಯುವಕರು ತಮ್ಮೊಳಗಿನ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು. ಸರಕಾರ ಕೊರಗರ ಜೊತೆ ಇದೆ ಎಂದು ಭರವಸೆ ನುಡಿದರು‌.

ಕಾರ್ಯಕ್ರಮದಲ್ಲಿ ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಡಿ. ಪೂಂಜ, ಮಂಗಳೂರು ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಬಾಲರಾಜ್ ಕೋಡಿಕಲ್, ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ರಶ್ಮಿ, ಕರ್ನಾಟಕ ಸರಕಾರದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತೆ ಹಾಗೂ ಕೊರಗ ಸಮುದಾಯದ ನಾಯಕಿ ಗೌರಿ ಕೆಂಜೂರು, ಬಳ್ಕುಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಬಿ. ಗುರಿಕಾರರಾದ ಜಬ್ಬ ಕೊರಗ ಮೊದಲಾದವರು ಉಪಸ್ಥಿತರಿದ್ದರು.

ಗಮನ ಸೆಳೆದ‌ ಮೆರವಣಿಗೆ ಸಹಿತ ವಿಶಿಷ್ಠ ಆಚರಣೆಗಳು:
ಸಭಾ ಕಾರ್ಯಕ್ರಮಕ್ಕೂ ಮುನ್ನ ಹಬ್ಬದ ಸಾಂಸ್ಕೃತಿಕ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ರಸ್ತೆ, ಬಯಲು ದಾರಿಯಾಗಿ ಸಾಗಿ ಬಂದ ಸಾಂಸ್ಕೃತಿಕ ಮೆರವಣಿಗೆ ಸಭಾವೇದಿಕೆಯ ಬಳಿ ಸಮಾರೋಪಗೊಂಡಿತು.

ಬಳಿಕ ಬಳ್ಕುಂಜೆ ತಾಲ್ಯಾನ್ ಮನೆತನದ ಗುರಿಕಾರ ಹಾಗೂ ಬಲೆಪಿನ ಹಿರಿಯರಾದ ಜಬ್ಬ ಕೊರಗ ಅವರು ವಿಶೇಷವಾಗಿ ಬಿದಿರಿನಲ್ಲಿ ಮಾಡಲಾಗಿದ್ದ ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ‌ ನೀಡಿದರು.

"ನಾವು ಸಾಯುತ್ತಲೇ ಇದ್ದೇವೆ. ನಮ್ಮ ಕಷ್ಟ ಸುಖ ಕೇಳುವವರಿಲ್ಲ. ಸ್ವಲ್ಪ ದಿನದಲ್ಲಿ ನಾವೆಲ್ಲರೂ ಸಾಯಬಹುದು, ಆದರೆ, ಸಾಯುವ ಮೊದಲು ಇಡೀ ವಿಶ್ವಕ್ಕೆ ನಮ್ಮ ಅಸ್ಥಿತ್ವವನ್ನು ತೋರಿಸಿಯೇ ಸಾಯುತ್ತೇವೆ."
-ಎಂ.‌ಸುಂದರ ಬೆಳುವಾಯಿ, ದ.ಕ. ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ


ಸರಕಾರಕ್ಕೆ ಉದ್ಯಾನವನ ಮಾಡಲು ಪ್ರಾಣಿ-ಪಕ್ಷಿಗಳಿಗೆ ಮೃಗಾಲಯ ನಿರ್ಮಿಸಲು ಸ್ಥಳವಿದೆ. ಆದರೆ ದೇಶದ ಮೂಲನಿವಾಸಿಗಳಾದ ಕೊರಗರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ನೀಡಲು ಸ್ಥಳವಿಲ್ಲ. ಕೊರಗರ ಅಭಿವೃದ್ಧಿಗೆ ಸರಕಾರ, ಜನಪ್ರತಿನಿಧಿಗಳು, ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು. ಆರೋಗ್ಯ ನಿಧಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹಾಗೂ ಎಲ್ಲಾ ಕೊರಗರಿಗೆ ನಿವೇಶನ‌ ನೀಡಿ ಎಂದು ಎಲ್ಲರಿಗೂ ಮನವಿಗಳ ಮೇಲೆ ಮನವಿ ಸಲ್ಲಿಸುತ್ತಿದ್ದೇವೆ. ಆದರೆ, ಸರಕಾರ ಇದ್ಯಾವುದಕ್ಕೂ ಗಮನ ಹರಿಸದೇ ಬಳ್ಕುಂಜೆಯ ಕೊರಗರು ಶತಮಾನಗಳಿಂದ ತಮ್ಮ ದೈವಗಳು ಹಾಗೂ ಕೃಷಿ ಮಾಡಿಕೊಂಡು‌ ಬರುತ್ತಿರುವ ಸುಮಾರು 12 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆಗೆ ನೀಡಲು ಮುಂದಾಗಿದೆ. ಇದು ಅಕ್ಷಮ್ಯ. ಈ ಕಾರಣಕ್ಕಾಗಿಯೇ ಈ ಸಾಲಿನ ಆಗಸ್ಟ್ 18-ಕೊರಗರ ಹಬ್ಬವನ್ನು ಬಳ್ಕುಂಜೆಯಲ್ಲಿ ಆಯೋಜಿಸಲಾಗಿದೆ. ಸರಕಾರ ಕೂಡಲೇ ನಮ್ಮ ಭೂಮಿಯ ಜೊತೆಗೆ ಕೈಗಾರಿಕೆಗೆ ನೀಡಲು ಮುಂದಾಗಿರುವ ಇಲ್ಲಿನ ಕೃಷಿ ಭೂಮಿಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ಜಿಲ್ಲೆ, ರಾಜ್ಯದ ಕೊರಗ ಸಮುದಾಯವು ಸಂತ್ರಸ್ತರೊಂದಿಗೆ ನಿಂತು ಉಗ್ರಹೋರಾಟವನ್ನು ಸಂಘಟಿಸಲಿದೆ ಎಂದು ಮಂಗಳೂರು ಮ.ನ.ಪಾ. ನೌಕರರ ಸಂಘದ ಅಧ್ಯಕ್ಷ ಬಾಲರಾಜ್ ಕೋಡಿಕಲ್ ಸರಕಾರ, ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ನಮ್ಮ ದೈವಗಳ ಮೂಲಸ್ಥಾನ ಇದು. ಈ ಸ್ಥಳಕ್ಕೆ ನುರಾರು ವರ್ಷಗಳ‌ ಇತಿಹಾಸವಿದೆ. ಅಲ್ಲದೆ, 42ಕ್ಕೂ ಮಿಕ್ಕಿ ದೈವಸ್ಥಾನಗಳಿವೆ. ಜೊತೆಗೆ ನಮ್ಮ ಕೃಷಿ ಭೂಮಿಯೂ ಇದೆ. ಇವೆಲ್ಲವನ್ನೂ ಸರಕಾರ ಕೈಗಾರಿಕೆಗೆ ನೀಡಲು ಮುಂದಾಗಿದೆ. ಯಾವುದೇ ಕಾರಣಕ್ಕೂ ನಾವು ಈ ಭೂಮಿಯನ್ನು ಬಿಟ್ಟು ಹೊಗುವುದೇ ಇಲ್ಲ. ಸರಕಾರ, ಜನಪ್ರತಿನಿಧಿಗಳ ನಿಲುವಿನ ಬಗ್ಗೆ ಈಗಾಗಲೇ ನಮ್ಮ ದೈವಗಳಿಗೆ ದೂರು ನೀಡಿದ್ದೇವೆ. ಸರಕಾರ ಈ ನಿರ್ಧಾರವನ್ನು ಕೈಬಿಡಬೇಕು. ಇಲ್ಲದಿದ್ದ ಪಕ್ಷದಲ್ಲಿ ನಮ್ಮ ದೈವಗಳೇ ಅವರಿಗೆ ತಕ್ಕ ಶಾಸ್ತಿ ಮಾಡಲಿದೆ ಇದು ನಿಶ್ಚಿತ.
ಜಬ್ಬ ಕೊರಗ, ಬಳ್ಕುಂಜೆ ಕೊರಗ ಬಲೆಪು ಗುರಿಗಾರ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X