ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ: ಮನಪಾ ಆಯುಕ್ತರಿಗೆ ಎಎಪಿ ಮನವಿ
ಮಂಗಳೂರು, ಆ.18: ನಗರದ ರಸ್ತೆಗಳ ಸ್ವಚ್ಛತೆ ಮತ್ತು ಗುಂಡಿಗಳ ದುರಸ್ತಿಪಡಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ನಿಯೋಗವು ಗುರುವಾರ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಗರದ ಹಲವು ರಸ್ತೆಗಳು ಮತ್ತು ಬೀದಿ ದೀಪಗಳು ದಯನೀಯ ಸ್ಥಿತಿಯಲ್ಲಿದೆ. ನಗರದಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿದೆ. ಹಲವೆಡೆ ರಸ್ತೆಗಳು ದುರಸ್ತಿ ಕಾಣದೆ ವರ್ಷಗಳಾಗಿವೆ. ಎಲ್ಲೆಂದರಲ್ಲಿ ಗುಂಡಿ, ಹೊಂಡಗಳಿವೆ. ಇದರಿಂದ ಮಳೆಗಾಲದಲ್ಲಿ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿದೆ. ಹೊಂಡಗಳಲ್ಲಿ ನೀರು ಶೇಖರಣೆಗೊಂಡು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ ಎಂದು ಎಎಪಿ ನಿಯೋಗ ಮನಪಾ ಆಯುಕ್ತರ ಗಮನ ಸೆಳೆದಿದೆ.
ಎಎಪಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಅಶೋಕ್, ವೇಣುಗೋಪಾಲ್ ಪುಚ್ಚಪ್ಪಾಡಿ, ಜೆರಾರ್ಡ್ ಟವರ್ಸ್, ಅವ್ರೆನ್ ಡಿಸೋಜ, ಡೆಸ್ಮಾಂಡ್ ಡಿಸೋಜ, ಬೆನ್ನೆಂಟ್ ಕ್ರಾಸ್ತ, ರಾನಿ ಕ್ರಾಸ್ತಾ, ಗ್ಲೇವಿನ್, ಶಾನನ್ ಪಿಂಟೋ, ಶ್ರಿನಿವಾಸ್ ಮತ್ತಿತರರು ನಿಯೋಗದಲ್ಲಿದ್ದರು.
Next Story