ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, ಕೆಲವರು ಸಿಲುಕಿರುವ ಶಂಕೆ

ಸಾಂದರ್ಭಿಕ ಚಿತ್ರ,Photo:PTI
ಹೊಸದಿಲ್ಲಿ ಮುಂಬೈನ ಉಪ ನಗರ ಬೊರಿವಲಿಯಲ್ಲಿ ಶುಕ್ರವಾರ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಈ ತನಕ ಯಾವುದೇ ಗಾಯ-ನೋವಿನ ಕುರಿತು ವರದಿಯಾಗಿಲ್ಲ ಎಂದು NDTV ವರದಿ ಮಾಡಿದೆ
ಕಟ್ಟಡ ಶಿಥಿಲವಾಗಿದೆ ಎಂದು ಘೋಷಿಸಿ ತೆರವು ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳವು ಘಟನೆಯನ್ನು ವರದಿ ಮಾಡಿದ್ದು, ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ.
ಎಂಟು ಅಗ್ನಿಶಾಮಕ ವಾಹನಗಳು, ಎರಡು ರಕ್ಷಣಾ ವ್ಯಾನ್ಗಳು ಹಾಗೂ ಮೂರು ಆ್ಯಂಬುಲನ್ಸ್ಗಳು ಈಗಾಗಲೇ ಸ್ಥಳದಲ್ಲಿವೆ.
Next Story





