ದೇರಳಕಟ್ಟೆ: ಸರಕಾರಿ ಪದವಿಪೂರ್ವ ಕಾಲೇಜು ಉದ್ಘಾಟನೆ

ದೇರಳಕಟ್ಟೆ : ಸ್ಥಳೀಯರ ಬೇಡಿಕೆ ಆಗಿದ್ದ ಪಿಯು ಕಾಲೇಜು ದೇರಳಕಟ್ಟೆ ಹೃದಯ ಭಾಗದಲ್ಲಿ ತೆರೆಯಲು ಪಿಯು ಶಿಕ್ಷಣ ಮಂಡಳಿ ಅನುಮತಿ ನೀಡಿದೆ.
ಕಲಾ, ವಿಜ್ಞಾನ, ವಾಣಿಜ್ಯ, ಕಂಪ್ಯೂಟರ್ ಸೈನ್ಸ್ ಗೆ ಅನುಮತಿ ದೊರಕಿದ್ದು ಸದ್ಯ ಕಲಾ ವಿಭಾಗ ಆರಂಭಗೊಂಡಿದೆ. ಏಳು ವಿದ್ಯಾರ್ಥಿಗಳು ಹಾಗೂ ಐದು ವಿದ್ಯಾರ್ಥಿನಿಯರು ಸೇರಿದಂತೆ 12 ಕಲಾ ವಿಭಾಗ ಕ್ಕೆ ಪ್ರವೇಶ ಪಡೆದಿದ್ದಾರೆ. ಉಳಿದ ವಿಭಾಗಗಳು ಮುಂದಿನ ಹಂತದಲ್ಲಿ ಆರಂಭಗೊಳ್ಳಲಿದ್ದು, ಕಲಾ ವಿಭಾಗದ ಕನ್ನಡ ಹೊರತು ಪಡಿಸಿ ಉಳಿದ ವಿಷಯಗಳಿಗೆ ಪ್ರಾಧ್ಯಾಪಕರ ನೇಮಕ ಕೂಡಾ ಆಗಿದೆ. ಇದರ ಉದ್ಘಾಟನೆ ಶುಕ್ರವಾರ ನೇರವೇರಿದೆ.
ಕಾಲೇಜು ಉದ್ಘಾಟನೆಯನ್ನು ಶಾಸಕ ಯು ಟಿ ಖಾದರ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲ ಆಗಿದೆ. ಪ್ರಾಥಮಿಕ ಶಾಲೆ ಆರಂಭ ಗೊಂಡ ದೇರಳಕಟ್ಟೆ ಯಲ್ಲಿ ಈಗ ಪಿಯು ಕಾಲೇಜು ಆರಂಭಗೊಂಡಿದೆ. ಗ್ರಾಮೀಣ ಪ್ರದೇಶಗಳಿಗೆ ಪ್ರೌಢ ಶಾಲೆ ತಲುಪಿದೆ. ದೇರಳಕಟ್ಟೆಯಲ್ಲಿ ಕಟ್ಟಡ ಹಾಗೂ ಕೊಠಡಿ ಸಮಸ್ಯೆ ಗಳಿಗೆ ಶೀಘ್ರ ಪರಿಹಾರ ವ್ಯವಸ್ಥೆ ಮಾಡಲಾಗುವುದು. ಮೂರು ಹಂತಸ್ತಿನ ಕಟ್ಟಡಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಸತ್ತಾರ್ ಸಿಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ದೇರಳಕಟ್ಟೆ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಎಸ್ ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಪನೀರ್, ಬಾಬು ಪಿಲಾರ್,ಶಿಶು ಅಭಿವೃದ್ಧಿ ಅಧಿಕಾರಿ ಹರೀಶ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ರೈ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಬೆಳ್ಮ ಪಂಚಾಯತ್ಉಪಾಧ್ಯಕ್ಷ ರಮ್ಲತ್, ಮಾಜಿ ಅಧ್ಯಕ್ಷ ಯೂಸುಫ್ ಬಾವ, ಸದಸ್ಯ ಇಕ್ಬಾಲ್ ದೇರಳಕಟ್ಟೆ, ಮಾಜಿ ಸದಸ್ಯ ಕಬೀರ್ ದೇರಳಕಟ್ಟೆ, ಮಾಜಿ ಅಧ್ಯಕ್ಷ ವಿಜಯ, ಪಿಯು ಕಾಲೇಜು ಪ್ರಿನ್ಸಿಪಾಲ್ ಗವoಕರ್ ,ನಾರಾಯಣ ಶೆಟ್ಟಿ, ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಸಯ್ಯದ್ ಅಲಿ, ಫಾರೂಕ್ ಸಿ ಎಂ, ಪುಷ್ಪಲತಾ, ಸುರೇಶ್, ಹನೀಫ್, ಶಿಯಾಬುದಿನ್, ರವಿ ರಾಜ್ ಶೆಟ್ಟಿ, ರವೂಫ್ ಸಿ.ಎಂ, ಸಿದ್ದಿಕ್ ಗ್ಲಾಡ್, ಸುರೇಶ ಆಚಾರ್ಯ,ಮತ್ತಿತರರು ಉಪಸ್ಥಿತರಿದ್ದರು.
ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ನಯನ ಸ್ವಾಗತಿಸಿದರು








.jpeg)


