ಶಿವಮೊಗ್ಗ ತಾಲೂಕಿನಾದ್ಯಂತ ನಿಷೇದಾಜ್ಞೆ ವಿಸ್ತರಣೆ

ಡಾ.ಆರ್.ಸೆಲ್ವಮಣಿ - ಜಿಲ್ಲಾಧಿಕಾರಿ
ಶಿವಮೊಗ್ಗ: ನಗರದ ಎಎ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಪ್ರಕರಣದಿಂದಾಗಿ ನಗರದಲ್ಲಿ ಜಾರಿಗೊಳಿಸಲಾಗಿದ್ದ ಸೆಕ್ಷನ್ 144 ನಿಷೇದಾಜ್ಞೆಯನ್ನು ಆ.23 ರವರೆಗೆ ಶಿವಮೊಗ್ಗ ತಾಲೂಕಿನಾದ್ಯಂತ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
75 ನೇ ಸ್ವತಂತ್ರ ಅಮೃತಮೋಹತ್ಸವದ ದಿನದಂದು ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಸುವ ವಿಚಾರವಾಗಿ ಅನ್ಯ ಕೋಮುಗಳ ನಡುವೆ ಗಲಾಟೆ ನಡೆದ ಗಲಾಟೆಯ ನಂತರ ಓರ್ವ ಯುವಕನಿಗೆ ಚಾಕು ಇರಿಯಲಾಗಿತ್ತು.ಇದರಿಂದಾಗಿ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.ಹಾಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ಪಟ್ಟಣಗಳಲ್ಲಿ ಸೆಕ್ಷನ್ 144 ನಿಷೇದಾಜ್ಙೆ ಜಾರಿಗೊಳಿಸಲಾಗಿತ್ತು.ಕಳೆದೆರಡು ದಿನಗಳಿಂದ ಸಹಜ ಸ್ಥಿತಿಗೆ ಶಿವಮೊಗ್ಗ ಬಂದಿತು ಹಾಗೂ ವ್ಯಾಪಾರ ವಹಿವಾಟಿಗೆ ರಾತ್ರಿ 9 ರ ತನಕ ಅವಕಾಶ ಕಲ್ಲಿಸಿ ಕೊಡಲಾಗಿತ್ತು.
ಭದ್ರಾವತಿ ಪಟ್ಟಣ ಹೊರತುಪಡಿಸಿ ಶುಕ್ರವಾರ ಮತ್ತೆ ಶಿವಮೊಗ್ಗ ತಾಲೂಕಿನಾದ್ಯಂತ ನಿಷೇದಾಜ್ಙೆ ವಿಸ್ತರಣೆ ಮಾಡಿದ್ದು, ಆ.23 ರವರೆಗೆ ಕೆಲವು ನಿಯಮಗಳನ್ನು ಸಡಿಲಗೊಳಿಸಿ ರಾತ್ರಿ 10 ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ.





