ಬೆಂಗಳೂರು | ಪತಿಯ ಅಪಹರಣ ಪ್ರಕರಣ: ಪತ್ನಿ ಸೇರಿ ಹಲವರ ಬಂಧನ

ಬೆಂಗಳೂರು (Bengaluru), ಆ.19: ಪ್ರಿಯಕರನ ಜೊತೆ ಸೇರಿ ಪತಿಯನ್ನು ಅಪಹರಣ ಮಾಡಿದ ಪತ್ನಿ ಸೇರಿ ಹಲವರನ್ನು ಇಲ್ಲಿನ ಪೀಣ್ಯಾ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿಗೆ ನವೀನ್ ಎಂಬುವರು ಕಾಣೆಯಾಗಿದ್ದಾರೆ ಎಂದು ಸಹೋದರಿ ವರಲಕ್ಷ್ಮೀ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆಯನ್ನು ಆರಂಭಿಸಿದರು.
ತನಿಖೆ ವೇಳೆ ಅತ್ತಿಗೆಯ ಮೇಲೆ ನವೀನ್ ತಂಗಿ ವರಲಕ್ಷ್ಮೀ ಅನುಮಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಪೊಲೀಸರು ನವೀನ್ ಪತ್ನಿ ಅನುಪಲ್ಲವಿ ಅವರ ಮೊಬೈಲ್ ಪರಿಶೀಲನೆ ನಡೆಸಿದಾಗ ಉದ್ಯಮಿ ಹಿಮಂತ್ ಎಂಬುವರ ಜೊತೆ ನಿರಂತರ ಸಂಪರ್ಕದಲ್ಲಿದ್ದದ್ದು ತಿಳಿದು ಬಂದಿದೆ.
ಈ ಹಿನ್ನೆಲೆ ಹಿಮಂತ್‍ಗೆ ಕರೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದ್ದು, ಕೃತ್ಯಕ್ಕೆ ಸಹಾಯ ಮಾಡಿದ ತಮಿಳುನಾಡು ಮೂಲದ ನಾಗರಾಜು, ಹರೀಶ್ ಹಾಗೂ ಮುಲಿಗನ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
Next Story







