ಉಡುಪಿ ಜಿಲ್ಲಾ ರಜತ ಮಹೋತ್ಸವ; ಆ.25ರಿಂದ ಜ.25ರವರೆಗೆ ನಿರಂತರ ಕಾರ್ಯಕ್ರಮ: ಸಚಿವ ಸುನೀಲ್

ಉಡುಪಿ : ಉಡುಪಿ ಜಿಲ್ಲೆ ರಚನೆಯಾಗಿ ಆ.25ಕ್ಕೆ 25ವರ್ಷ ಪೂರೈಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತ -75, ಉಡುಪಿ -25 ಎಂಬ ಶಿರ್ಷಿಕೆ ಯಡಿಯಲ್ಲಿ ಆ.25ರಿಂದ ಜ.25ರವರೆಗೆ ನಿರಂತರ ಆರು ತಿಂಗಳಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಮಣಿಪಾಲದ ಖಾಸಗಿ ಹೊಟೇಲಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಜತ ಮಹೋತ್ಸವದ ಉದ್ಘಾಟನೆಯ ಪ್ರಯುಕ್ತ ಆ.೨೫ ರಂದು ಅಪರಾಹ್ನ ೩ಗಂಟೆಗೆ ನಗರದ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡಿನ ವರೆಗೆ ಬೃಹತ್ ಮೆರವಣಿಗೆ ಹೊರಡಲಿದೆ. ಬಳಿಕ ಅಜ್ಜರಕಾಡಿನ ಕ್ರೀಡಾಂಗಣ ದಲ್ಲಿ ರಜತ ಮಹೋತ್ಸವವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿರುವರು ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಅದೇ ರೀತಿ 1997ರಲ್ಲಿನ ಎಲ್ಲ ಶಾಸಕರನ್ನು ಮತ್ತು ಅಲ್ಲಿಂದ ಇಲ್ಲಿವರೆಗೆ ಗ್ರಾಪಂನಿಂದ ಲೋಕಸಭೆಯವರೆಗೆ ಚುನಾಯಿತರಾದ ಜನಪ್ರತಿನಿಧಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭಕ್ಕೆ ಪೂರ್ವಭಾವಿ ಯಾಗಿ ಹಾಗೂ ಜಿಲ್ಲೆಯ ಯುವಕರನ್ನು ಸೇನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆ.24ರಂದು ಅಗ್ನಿಪಥ್ ದೌಡ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಕಾರ್ಕಳ ಭುವನೇಂದ್ರ ಕಾಲೇಜಿ ನಿಂದ ಪ್ರಾರಂಭವಾದ ಈ ಮ್ಯಾರಥಾನ್, ಬೆಳ್ಮಣ್, ಶಿರ್ವ, ಕಾಪು ಮಾರ್ಗ ವಾಗಿ ಉಡುಪಿಯನ್ನು ತಲುಪಲಿದೆ. ಇದರಲ್ಲಿ ೨೫ ಕಾಲೇಜುಗಳ ವಿದ್ಯಾರ್ಥಿ ಗಳು ಭಾಗವಹಿಸಲಿರುವರು ಮತ್ತು ೨೫ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಮುಂದಿನ ಆರು ತಿಂಗಳಲ್ಲಿ ಎಲ್ಲ ಸಹಕಾರದೊಂದಿಗೆ ಭವಿಷ್ಯದ ಉಡುಪಿ ಹೇಗೆ ಇರಬೇಕೆಂಬ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲು ಉದ್ದೇಶಿಸಲಾಗುವುದು. ಸಾಂಸ್ಕೃತಿಕವಾಗಿ, ಪ್ರಮೋಸೋದ್ಯಮ, ಅಭಿವೃದ್ಧಿಯಲ್ಲಿ ಜಿಲ್ಲೆ ಯಾವ ರೀತಿ ಬೆಳೆಯಬೇಕು ಮತ್ತು ಇದರಲ್ಲಿ ಸರಕಾರ ಹಾಗೂ ನಾಗರಿಕರ ಪಾತ್ರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯ ಪ್ರಕಾಶ್ ಹೆಗ್ಡೆ, ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಜಿಪಂ ಸಿಇಓ ಎಚ್.ಪ್ರಸನ್ನ, ಎಸ್ಪಿ ಅಕ್ಷಯ್ ಎಂ.ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಮೂರು ತಿಂಗಳು ರಥಯಾತ್ರೆ
ರಜತ ಮಹೋತ್ಸವದ ಪ್ರಯುಕ್ತ ಜಿಲ್ಲೆಯ ಪ್ರವಾಸೋದ್ಯಮದ ಚಟುವಟಿಕೆ ಗಳನ್ನು ರಾಜ್ಯದ ಜನತೆಗೆ ತಿಳಿಸುವ ಹಾಗೂ ಉಡುಪಿಗೆ ಆಹ್ವಾನಿಸುವ ಉದ್ದೇಶ ದಿಂದ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿಯಿಂದ ಆರಂಭ ಗೊಳ್ಳುವ ಈ ರಥಯಾತ್ರೆ ಮೂರು ತಿಂಗಳಗಳ ಕಾಲ ರಾಜ್ಯಾದ್ಯಂತ ಸಂಚರಿಸ ಲಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಜ.೨೫ರಂದು ರಜತ ಮಹೋತ್ಸವದ ಸಮಾರೋಪ ಸಮಾರಂಭವು ಉಡುಪಿ ರಜತ ಉತ್ಸವ ಹೆಸರಿನಲ್ಲಿ ನಡೆಯಲಿದೆ. ದೊಡ್ಡಮಟ್ಟದ ಈ ಉತ್ಸವ ಜನರ ಕಾರ್ಯಕ್ರಮವೇ ಹೊರತು ಸರಕಾರಿ ಕಾರ್ಯಕ್ರಮ ಆಗಿ ಇರುವುದಿಲ್ಲ. ಅದೇ ರೀತಿ ಆ.25ರ ನಂತರ ಪ್ರತಿ ತಿಂಗಳ ೨೫ರಂದು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲೂ ಸಂಭ್ರಮದ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.