ಬಿಬಿಎ ವಿದ್ಯಾರ್ಥಿ ಆತ್ಮಹತ್ಯೆ

ಕಾರ್ಕಳ : ನಿಟ್ಟೆ ಕಾಲೇಜಿನ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಆ.18ರಂದು ಸಂಜೆ ರಾತ್ರಿ ವೇಳೆ ನಡೆದಿದೆ.
ಮೃತರನ್ನು ಪ್ರಕಾಶ ಪೈ ಎಂಬವರ ಮಗ ವಿಘ್ನೇಶ ಪೈ ಎಂದು ಗುರುತಿಸಲಾಗಿದೆ.
ಕಾಲೇಜಿನಿಂದ ಮನೆಗೆ ಬಂದ ವಿಘ್ನೇಶ್ ಆಯಾಸವಾಗಿದೆ ಎಂದು ರೂಮಿನಲ್ಲಿ ಮಲಗಿದ್ದರು. ಈ ಮಧ್ಯೆ ಅವರು ವೈಯಕ್ತಿಕ ಕಾರಣದಿಂದ ಮನ ನೊಂದು ಕಾರ್‌ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





