ಕರಾಟೆ ಸಾಧಕಿ ತೃಷಾಳಿಗೆ ಸನ್ಮಾನ

ಮಂಗಳೂರು : ಕರಾಟೆಯಲ್ಲಿ ಅಪ್ರತಿಮ ಸಾಧನೆಗೈದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಏಳನೆಯ ಪಡೆ (ಆಸೈಗೋಳಿ-ಮಂಗಳೂರು)ಯ ಸಿಬ್ಬಂದಿ ಎಸ್. ಕರುಣಾಕರ ಅವರ ಪುತ್ರಿ,ಶಾರದಾ ವಿದ್ಯಾ ಗಣಪತಿ ಶಾಲೆಯ ೬ನೆಯ ತರಗತಿ ವಿದ್ಯಾರ್ಥಿನಿ ತೃಷಾ ಅವರನ್ನು ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ವರ್ಗದ ವತಿಯಿಂದ ಸನ್ಮಾನಿಸಲಾಯಿತು.
ಸಂಜೀವ ದತ್ತ ಮಹಾಲೆ, ಬಶೀರ್ ಚೊಕ್ಕಬೆಟ್ಟು, ಜೆ. ಮಂಜುನಾಥ ಕಾರ್ಯಕ್ರಮ ಆಯೋಜಿಸಿದ್ದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಎಆರ್‌ಎಸ್ಸೈ ಗಳಾದ ಕೆ.ದಾಮೋದರ. ನಾರಾಯಣ ಮೂಲ್ಯ, ಹೆಡ್ ಕಾನ್‌ಸ್ಟೇಬಲ್ ಬಶೀರ್ ಅಹ್ಮದ್ ಮುಲ್ಲಾ, ರೋನಿ ಡಿಸೋಜ, ಕಾನ್‌ಸ್ಟೇಬಲ್ ಸತೀಶ್ ಉಪಸ್ಥಿತರಿದ್ದರು.
Next Story





