ಕೋಲ್ನಾಡ್: ಸರಣಿ ಅಪಘಾತ; ಬೈಕ್ ಸವಾರರಿಗೆ ಗಂಭೀರ ಗಾಯ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಲ್ನಾಡು ಬಳಿ ಎರಡು ಬೈಕ್ ಮತ್ತು ಕಾರುಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಸವಾರರಿಬ್ಬರು ಇಬ್ಬರು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಮುಲ್ಕಿ ಸಮೀಪದ ಕೋಲ್ನಾಡು ಜಂಕ್ಷನ್ ಬಳಿ ಬೈಕ್ ಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ಬೈಕ್ ಸವಾರ ನಿಯಂತ್ರಣ ತಪ್ಪಿ, ಕೊಲ್ನಾಡು ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದ ಬುಲೆಟ್ ಗೆ ಢಿಕ್ಕಿ ಹೊಡೆದಿದ್ದಾರೆ.
ಅಪಘಾತದ ರಭಸಕ್ಕೆ ಬೈಕ್ ಹಾಗೂ ಬುಲೆಟ್ ತೀವ್ರ ಜಖಂಗೊಂಡಿದ್ದು, ಸವಾರರಾದ ಕೆಎಸ್ ರಾವ್ ನಗರ ಸೊಸೈಟಿ ಬಳಿ ನಿವಾಸಿ ಬದ್ರುಲ್ ಮುನೀರ್ ಹಾಗೂ ಕಾರ್ನಾಡು ಅಮೃತಾನಂದಮಯಿ ನಗರದ ನಿವಾಸಿ ರಾಜೇಶ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕಾರು ಚಾಲಕ ಕಾಸರಗೋಡು ಮಾವುಂಗಾಲ್ ನಿವಾಸಿ ತಾಹೀರ್ ಆಲಿ ವಿರುದ್ಧ ಪ್ರಕರಣ ದಾಖಲಾಗಿದೆ.
Next Story