ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಮೇಘಸ್ಫೋಟ: ವಿಪತ್ತು ನಿರ್ವಹಣಾ ತಂಡ ದೌಡು

ಸಾಂದರ್ಭಿಕ ಚಿತ್ರ, Photo:PTI
ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ರಾಯ್ಪುರ ಬ್ಲಾಕ್ನಲ್ಲಿ ಶನಿವಾರ ಮುಂಜಾನೆ ಮೇಘಸ್ಫೋಟ (Cloudburst In Uttarakhand's Dehradun) ಸಂಭವಿಸಿದೆ.
ಜಿಲ್ಲೆಯ ಸರ್ಖೇತ್ ಗ್ರಾಮದಲ್ಲಿ ಇಂದು ಮುಂಜಾನೆ 2:45 ಕ್ಕೆ ಸ್ಥಳೀಯರು ಮೇಘಸ್ಫೋಟ ವರದಿ ಮಾಡಿದ್ದಾರೆ. ಮಾಹಿತಿ ಪಡೆದ ರಾಜ್ಯ ವಿಪತ್ತು ನಿರ್ವಹಣಾ ಪಡೆ ಅಥವಾ ಎಸ್ಡಿಆರ್ಎಫ್ ತಂಡ ಸ್ಥಳಕ್ಕೆ ಧಾವಿಸಿದೆ.
"ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಎಲ್ಲ ಜನರನ್ನು ರಕ್ಷಿಸಲಾಯಿತು ಹಾಗೂ ಕೆಲವರು ಹತ್ತಿರದ ರೆಸಾರ್ಟ್ನಲ್ಲಿ ಆಶ್ರಯ ಪಡೆದರು" ಎಂದು ವಿಪತ್ತು ನಿರ್ವಹಣಾ ತಂಡ ತಿಳಿಸಿದೆ.
ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಡೆಹ್ರಾಡೂನ್ನ ಪ್ರಸಿದ್ಧ ತಪಕೇಶ್ವರ ಮಹಾದೇವ ದೇವಸ್ಥಾನದ ಬಳಿ ಹರಿಯುವ ತಾಮಸಾ ನದಿಯು ಭೀಕರ ಸ್ವರೂಪವನ್ನು ಪಡೆದುಕೊಂಡಿದೆ. ಇದರಿಂದಾಗಿ ಮಾತಾ ವೈಷ್ಣೋದೇವಿ ಗುಹೆ ಯೋಗ ದೇವಾಲಯ ಹಾಗೂ ತಪಕೇಶ್ವರ ಮಹಾದೇವನ ಸಂಪರ್ಕ ಕಡಿತಗೊಂಡಿದೆ.
ಭಾರೀ ಮಳೆ ಹಾಗೂ ಹಠಾತ್ ಪ್ರವಾಹದ ಹಿನ್ನೆಲೆಯಲ್ಲಿ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಭಕ್ತರ ಮೇಲ್ಮುಖ ಸಂಚಾರವನ್ನು ಸ್ವಲ್ಪ ಕಾಲ ನಿಲ್ಲಿಸಲಾಯಿತು.







