ಹಿಮಾಚಲದಲ್ಲಿ ಭಾರೀ ಮಳೆ: ಚಕ್ಕಿನದಿಯ ರೈಲ್ವೆ ಸೇತುವೆ ಕುಸಿತ

Photo: Twitter/@ANI
ಕಂಗ್ರಾ: ಹಿಮಾಚಲ ಪ್ರದೇಶದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು ಕಂಗ್ರಾ ಜಿಲ್ಲೆಯಲ್ಲಿ ಭಾರೀ ಮಳೆಗೆ ಚಕ್ಕಿ ಸೇತುವೆ ಇಂದು ಕುಸಿದಿದ್ದು, ಅದರ ಮೂರು ಪಿಲ್ಲರ್ಗಳಲ್ಲಿ ಒಂದು ಸಂಪೂರ್ಣ ಹಾನಿಯಾಗಿದೆ.
ದೃಶ್ಯಗಳಲ್ಲಿ ಚಕ್ಕಿ ನದಿಯ ಮೇಲೆ ನಿರ್ಮಿಸಲಾದ ರೈಲ್ವೆ ಸೇತುವೆಯ ಒಂದು ಭಾಗವು ಮಳೆಯ ನಡುವೆ ಕುಸಿದಿರುವುದನ್ನು ಕಾಣಬಹುದು.
ಇಂದು ಧರ್ಮಶಾಲಾದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ರಾಜ್ಯದ ಮಂಡಿ ಜಿಲ್ಲೆಯಲ್ಲಿ ಇಂದು ಮುಂಜಾನೆ ಹಠಾತ್ ಪ್ರವಾಹ ಸಂಭವಿಸಿದ್ದು, ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿತು, ನಿವಾಸಿಗಳು ಸಿಕ್ಕಿಹಾಕಿಕೊಂಡಿದ್ದರು ಮತ್ತು ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. ಈ ಘಟನೆಯು ಜಿಲ್ಲೆಯ ಬಾಲ್, ಸದರ್, ಥುನಾಗ್, ಮಂಡಿ ಹಾಗೂ ಲಮಾಥಾಚ್ನಲ್ಲಿನ ಸ್ಥಳಗಳಲ್ಲಿ ಪರಿಣಾಮ ಬೀರಿತು.
ಭಾರೀ ಮಳೆಯಿಂದಾಗಿ ಕಂಗ್ರಾ, ಕುಲು ಹಾಗೂ ಮಂಡಿ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.
#HimachalPradesh #HimachalRains
— TOIChandigarh (@TOIChandigarh) August 20, 2022
Chakki railway bridge near Pathankot in #Kangra district collapses. pic.twitter.com/4I0ZtkcZPn







