ಭಟ್ಕಳ ಸದ್ಭಾವನಾ ಮಂಚ್ ನಿಂದ ಸಾರ್ವಜನಿಕ ಪ್ರತಿಜ್ಞಾ ಸ್ವೀಕಾರ

ಭಟ್ಕಳ: ಸದ್ಭಾವನಾ ಮಂಚ್ ಭಟ್ಕಳವು ಇಲ್ಲಿನ ಶಮ್ಸುದ್ದೀನ್ ವೃತ್ತದ ಬಳಿ ಸಾರ್ವಜನಿಕ ಸದ್ಭಾವನಾ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಪ್ರತಿಜ್ಞಾ ಸ್ವೀಕರಿಸಿ ಮಾತನಾಡಿದ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾ ದೇವಿ, ಕೋಮು ಸೌಹಾರ್ದತೆ ಮತ್ತು ಶಾಂತಿಯನ್ನು ಪ್ರಚಾರಗೊಳಿಸುವಲ್ಲಿ ಭಟ್ಕಳದ ಸದ್ಭಾವನಾ ಮಂಚ್ ಸಕ್ರೀಯವಾಗಿದ್ದು ಇಂತಹ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಉತ್ತಮ ಸಂದೇಶವನ್ನು ನೀಡುತ್ತಿದೆ ಎಂದರು.
ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶ್ ಕುಮಾರ್, ದೇಶದಲ್ಲಿ ಇಂದು ಕೋಮುದಳ್ಳೂರಿ, ದ್ವೇಷ ಅಸೋಯೆ ಹೆಚ್ಚಾಗುತ್ತಿದ್ದು ಇಂತಹ ಸಂದರ್ಭದಲ್ಲಿ ದಿ.ರಾಜೀವ್ ಗಾಂಧಿಯವರ ಹುಟ್ಟು ಹಬ್ಬವನ್ನು ಸದ್ಭಾವನಾ ದಿನವನ್ನಾಗಿ ಆಚರಿಸುವುದರ ಮೂಲಕ ದೇಶದಲ್ಲಿ ಪ್ರೀತಿ ಪ್ರೇಮವನ್ನು ಬೆಳೆಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ ಮಾತನಾಡಿ, ನಾವೆಲ್ಲರೂ ವೈಯಕ್ತಿವಾಗಿ ತಮ್ಮ ತಮ್ಮ ಹೊಣೆಗಾರಿಕೆಯನ್ನು ಅರಿತು ಪ್ರತಿಜ್ಞಾವಿಧಿಯಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದರು.
ಅಂಜುಮನ್ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಆರ್.ಎಸ್.ನಾಯಕ್, ಮಾಜಿ ಶಾಸಕ ಜೆ.ಡಿ.ನಾಯ್ಕ, ತಂಝೀಮ್ ಮುಖಂಡ ಇನಾಯತುಲ್ಲಾ ಶಾಬಂದ್ರಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಮುಖಂಡರಾದ ಮೌಲಾನ ಸೈಯದ್ಯ ಝುಬೇರ್, ಮುಜಾಹಿದ್ ಮುಸ್ತಫಾ ಪಯಾಮೆ ಇನ್ಸಾನಿಯತ್ ನ ಮೌಲಾನ ಇರ್ಷಾದ್ ನಾಯ್ತೆ ನದ್ವಿ ಸಂದೇಶ ನೀಡಿದರು.
ಸದ್ಭಾವನಾ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ನಗರಠಾಣೆಯ ಪಿ.ಎಸ್.ಐ. ಹನುಮಂತ ಕುಡಗುಂಡಿ, ಸೈಯ್ಯದ್ ಶಕೀಲ್ ಎಸ್.ಎಂ., ಸಲಾಹುದ್ದೀನ್ ಎಸ್.ಕೆ, ಸದ್ಭಾವನ ಮಂಚ್ ಉಪಾಧ್ಯಕ್ಷ ಪಾಸ್ಕಲ್ ಗೋಮ್ಸ್, ಪತ್ರಕರ್ತ ಮನಮೋಹನ್ ನಾಯ್ಕ, ಆಸಿಫ್ ಶೇಕ್, ಖಮರುದ್ದೀನ್ ಮಷಾಯಿಕ್ ಮತ್ತಿತರರು ಹಾಜರಿದ್ದರು.









.jpeg)


