ಮಂಗಳೂರು: ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮ ದಿನಾಚರಣೆ

ಮಂಗಳೂರು : ಮಾಜಿ ಪ್ರಧಾನಿ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಜನ್ಮದಿನಾಚರಣೆಯ ಕಾರ್ಯಕ್ರಮವು ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ದೇಶವನ್ನು ಆಧುನಿಕ ಭಾರತವನ್ನಾಗಿ ಕಟ್ಟಬೇಕೆನ್ನುವ ಕಲ್ಪನೆಯಿಂದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಸಾಧನೆಗಳ ಮೂಲಕ ಜನಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಗೌರವ ಮತ್ತು ಕೃತಜ್ಞತೆಯಿಂದ ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರಾಜ್ಯದ ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ಜನರ ಪರವಾಗಿ ಕೆಲಸ ಮಾಡಿದ್ದರು. ರಾಜ್ಯದಲ್ಲಿ ಸಮಾನತೆಯ ಬುನಾದಿಯ ಮೇಲೆ ಸಮಾಜವನ್ನು ಕಟ್ಟುವ ಮೂಲಕ ಸರ್ವ ಜನರ ಕಲ್ಯಾಣವನ್ನು ಬಯಸಿದ್ದ ಮುತ್ಸದ್ಧಿ ರಾಜಕಾರಣಿಯಾಗಿದ್ದ ಅವರು ಅತ್ಯುತ್ತಮ ಮಾರ್ಗದರ್ಶಕ ರಾಗಿದ್ದರು ಎಂದು ರಮಾನಾಥ ರೈ ಹೇಳಿದರು.
ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಮಾಜಿ ಶಾಸಕ ಜೆ. ಆರ್.ಲೋಬೊ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿದರು.
ಉಮೇಶ್ ದಂಡಕೇರಿ, ಜೆ.ಅಬ್ದುಲ್ ಸಲೀಂ, ಪ್ರಕಾಶ್ ಸಾಲ್ಯಾನ್, ಬಿ.ಎಂ ಅಬ್ಬಾಸ್ ಅಲಿ, ಶಾಹುಲ್ ಹಮೀದ್, ಶುಭಾಷ್ ಶೆಟ್ಟಿ ಕೊಲ್ನಾಡು, ಲಾರೆನ್ಸ್ ಡಿಸೋಜ, ಜೆಸಿಂತಾ ಆಲ್ಫ್ರೆಡ್, ಲ್ಯಾನ್ಸ್‌ಲೋಟ್ ಪಿಂಟೊ, ಕೇಶವ ಮರೋಳಿ, ಶುಭೋದಯ ಆಳ್ವ, ಟಿ.ಕೆ. ಸುಧೀರ್, ಕೆ.ಅಪ್ಪಿ, ಮಲ್ಲಿಕಾ ಪಕ್ಕಳ, ಚಂದ್ರಕಲಾ ಡಿ. ರಾವ್, ಮುಹಮ್ಮದ್ ಮೋನು, ನೀರಜ್ ಪಾಲ್, ಪ್ರೇಮ್ ಬಳ್ಳಾಲ್‌ಭಾಗ್, ಸಂಶುದ್ದೀನ್ ಬಂದರ್, ಹಸನಬ್ಬ ಅಮ್ಮೆಂಬಳ, ಪದ್ಮಪ್ರಸಾದ್ ಜೈನ್, ಎಂ.ಪಿ. ಮನುರಾಜ್, ಶಾಂತಳಾ ಗಟ್ಟಿ, ಸಬಿತಾ ಮಿಸ್ಕಿತ್, ಚಂದ್ರಕಲಾ ಜೋಗಿ, ರಮಾನಂದ ಪೂಜಾರಿ, ಸೌಹಾನ್ ಎಸ್.ಕೆ, ಸಲೀಂ ಮಕ್ಕ, ಮಲ್ಲಿಕಾರ್ಜುನ ಕದ್ರಿ, ರಾಬಿನ್, ರೆಹಮಾನ್ ಕುಂಜತ್ತಬೈಲ್, ಆಲ್ವಿನ್, ಟಿ.ಹೊನ್ನಯ್ಯ, ಉದಯ ಕುಂದರ್, ಚೇತನ್ ಬೆಂಗ್ರೆ, ಮುಹಮ್ಮದ್ ಬಪ್ಪಳಿಗೆ, ಅಬ್ದುಲ್ ಅಲೀಂ, ಹೈದರ್ ಅಲಿ ಬೋಳಾರ್, ವಿಕ್ಟೋರಿಯ ಉಪಸ್ಥಿತರಿದ್ದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕಾಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ವಂದಿಸಿದರು.







