ಜಾನುವಾರು ಹಗರಣದಲ್ಲಿ ಟಿಎಂಸಿ ನಾಯಕನಿಗೆ ಜಾಮೀನು ನಿರಾಕರಣೆ
ಅಸನ್ಸೋಲ್ (ಪ.ಬಂ.),ಆ.20: ಜಾನುವಾರು ಕಳ್ಳ ಸಾಗಾಣಿಕೆ ಹಗರಣದಲ್ಲಿ ಬಂಧಿತರಾಗಿರುವ ಟಿಎಂಸಿ ನಾಯಕ ಅನುಬ್ರತ ಮಂಡಲ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶನಿವಾರ ತಿರಸ್ಕರಿಸಿದ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯವು, ಅವರ ಸಿಬಿಐ ಕಸ್ಟಡಿಯನ್ನು ಆ.24ರವರೆಗೆ ವಿಸ್ತರಿಸಿತು.
ಮಂಡಲ್ ರನ್ನು ‘ಅತ್ಯಂತ ಪ್ರಬಲ ಮತ್ತು ಅತ್ಯಂತ ಪ್ರಭಾವಿ ವ್ಯಕ್ತಿ’ ಎಂದು ಬಣ್ಣಿಸಿದ್ದ ಸಿಬಿಐ,ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಮತ್ತು ಸಾಕ್ಷಾಧಾರ ತಿರುಚಬಹುದು,ಹೀಗಾಗಿ ಅವರ ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕು ಎಂದು ನ್ಯಾಯಾಲಯವನ್ನು ಕೋರಿತ್ತು.
Next Story





