ಅಂತರ್ ಕಾಲೇಜು ಪುಟ್ಬಾಲ್ ಪಂದ್ಯಾಟ: ಕಣಚೂರು ಕಾಲೇಜು ತಂಡ ಜಯಭೇರಿ

ಕೊಣಾಜೆ: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪ್ರತಿಷ್ಠಿತ ಆರ್‌ಜಿಯುಎಚ್‌ಎಸ್, ಕರ್ನಾಟಕ ಮೈಸೂರು ವಲಯ ಅಂತರ ಕಾಲೇಜು ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಕಣಚೂರು ಎಎಚ್ ಎಸ್ ಕಾಲೇಜು ಜಯಗಳಿಸಿದೆ.
ಒಟ್ಟು 48 ತಂಡಗಳು 45 ನಾಕೌಟ್ ಪಂದ್ಯಗಳು ಮತ್ತು 7 ಲೀಗ್ ಪಂದ್ಯಗಳಲ್ಲಿ ಭಾಗವಹಿಸಿದ್ದವು.
ಕಣಚೂರ್ ತಂಡವು ಒಟ್ಟು 6 ಪಂದ್ಯಗಳಲ್ಲಿ ಆಡಿದ್ದು, ಕ್ವಾರ್ಟರ್ ಫೈನಲ್ ನಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 3-0 ಅಂಕದಿಂದ ಗೆದ್ದು ಜಯಗಳಿಸಿತು.
ಸೆಮಿಪೈನಲ್ ನಲ್ಲಿ ಶಿವಮೊಗ್ಗ ನರ್ಸಿಂಗ್ ಕಾಲೇಜು ಮಣಿಸಿದ ಕಣಚೂರು ತಂಡವು ಫೈನಲ್ ಪಂದ್ಯಾಟದಲ್ಲಿ ತೇಜಸ್ವಿನಿ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ವಿರುದ್ಧ ಫೈನಲ್ 4-3 ಅಂತರದಿಂದ ಕಣಚೂರು ಕಾಲೇಜು ತಂಡವು ಜಯಗಳಿಸಿ ಗೆಲುವಿನ ನಗೆ ಬೀರಿದೆ.
ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತ ಮಂಡಳಿ ಯ ಅಧ್ಯಕ್ಷರಾದ ಹಾಜಿ ಯು.ಕೆ. ಮೋನು , ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಗೂ ಪ್ರಾಂಶುಪಾಲರಾದ ಡಾ ಶಮೀಮಾ ವಿಜೇತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.








