ಒಂಭತ್ತುಕೆರೆ: ಅಲ್ ಮನಾರ್ ಸ್ಕೂಲ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಒಂಭತ್ತುಕೆರೆ: ಅಲ್ ಮನಾರ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಒಂಭತ್ತುಕೆರೆ - ಮುಕ್ಕಚ್ಚೆರಿ ವತಿಯಿಂದ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಶಾಲಾ ಅಧ್ಯಕ್ಷ ಮೊಹಮ್ಮದ್ ಫಿರೋಝ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ನಗರಸಭಾ ಸದಸ್ಯ ಖಲೀಲ್ ಇಬ್ರಾಹಿಂ, ಅಲ್ ಬಯಾನ್ ಅರೇಬಿಕ್ ಕಾಲೇಜಿನ ಉಪನ್ಯಾಸಕ ಸಾಜಿದ್ ಖಾನ್, ಶಾಲಾ ಕಾರ್ಯದರ್ಶಿ ಅಬ್ದುಲ್ ಸಮದ್ ಯು ಟಿ, ಶಾಲಾ ಸಂಚಾಲಕರಾದ ಯು ಟಿ ಸಮದ್, ಸದಸ್ಯರಾದ ಮೊಹಮ್ಮದ್ ಅಸ್ಫಾಖ್, ಅಬ್ದುಲ್ ರಹಿಮಾನ್, ಖಲೀಲ್, ಸಿರಾಜ್, ಆಸಿಫ್ ಮುಂತಾದವರು ಭಾಗವಹಿಸಿದ್ದರು.
ಧಜಾರೋಹಣವನ್ನು ಖಲೀಲ್ ಇಬ್ರಾಹಿಂ ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ ಫಾತಿಮಾ ಸ್ವಾಗತಿಸಿ, ಶಿಕ್ಷಕಿ ಸಫಾ ವಂದಿಸಿದರು.
ಪುಟಾಣಿಗಳಿಂದ ದೇಶಭಕ್ತಿ ಹಾಡು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
Next Story