ಉಡುಪಿ; ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಖಾತೆಯಿಂದ ಆನ್‌ಲೈನ್ ಮೂಲಕ ಹಣ ವರ್ಗಾವಣೆ

ಉಡುಪಿ, ಆ.21: ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಖಾತೆಯಿಂದ ಸಾವಿರಾರು ರೂ. ಹಣ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರ್ಕಳ ಸಣ್ಣಕ್ಕಿಬೆಟ್ಟುವಿನ ಸುಬ್ರಹ್ಮಣ್ಯ ಕೃಷ್ಣ ನಾಯ್ಕ(34) ಎಂಬವರ ಮೊಬೈಲ್‌ಗೆ ಆ.21ರಂದು ಕೆ.ವೈಸಿ ಅಪ್ಡೇಟ್ ಮಾಡುವ ಬಗ್ಗೆ ಸಂದೇಶ ಬಂದಿತ್ತು. ಈ ಸಂದೇಶವನ್ನು ಬ್ಯಾಂಕ್‌ನವರೆ ಕಳುಹಿಸಿರಬಹುದೆಂದು ತಿಳಿದ ಸುಬ್ರಹ್ಮಣ್ಯ ಲಿಂಕ್‌ನ್ನು ಓಪನ್ ಮಾಡಿದ್ದು, ಆಗ ಬಂದ ಓಟಿಪಿಯನ್ನು ಅಪಡೇಟ್ ಮಾಡಿದ ತಕ್ಷಣ ಇವರ ಬ್ಯಾಂಕ್ ಖಾತೆಯಿಂದ ಒಟ್ಟು 93,804ರೂ. ಹಣ ಕಡಿತಗೊಂಡು ವಂಚನೆಗೆ ಒಳಗಾಗಿದ್ದಾರೆಂದು ದೂರಲಾಗಿದೆ.
Next Story





